ನೆಲಮಂಗಲ: ಕರೊನಾ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸ ರುಡ್‌ಸೆಟ್ ಸಂಸ್ಥೆಯಿಂದ ಆಗಬೇಕು ಎಂದು ಸಂಸ್ಥೆ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಸಂಸ್ಥೆಗಳ 2019-20ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ ಮಾಡಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಯಿಂದ ತರಬೇತಿ ಪಡೆದು ಸ್ವ-ಉದ್ಯೋಗ ಕೈಗೊಂಡಿರುವ ಅಭ್ಯರ್ಥಿಗಳು ಕರೊನಾದಂತಹ ಸಂಕಷ್ಟದ ಸಮಯದಲ್ಲಿ ವ್ಯವಹಾರದ ಕುರಿತು ಧೈರ್ಯ ಕಳೆದುಕೊಳ್ಳದೆ ಉದ್ಯೋಗದಲ್ಲಿ ಯಶಸ್ಸು ಗಳಿಸಲು ಸಹಕಾರಿಯಾಗಬೇಕು ಎಂದರು. ಜತೆಗೆ ನಗರದ ರುಡ್‌ಸೆಟ್ ಸಂಸ್ಥೆಗಳ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಅರಿಶಿಣಕುಂಟೆಯಲ್ಲಿ ರುಡ್‌ಸೆಟ್ ಸಂಸ್ಥೆ 2019-20ನೇ ಸಾಲಿನ ವಾರ್ಷಿಕ ವರದಿಯನ್ನು ಕೇಂದ್ರೀಯ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಜನಾದರ್ನ ಬಿಡುಗಡೆ ಮಾಡಿದರು. ರುಡ್‌ಸೆಡ್ ಹಿರಿಯ ಉಪನ್ಯಾಸಕ ಎಂ. ಉದಯ್ ಕುಮಾರ್, ಸಿಬ್ಬಂದಿ ಶ್ರೀನಿವಾಸಯ್ಯ, ಅರುಣ್ ಕುಮಾರ್, ನರಸಿಂಹಯ್ಯ, ಹನುಮಂತಯ್ಯ ಮತ್ತಿತರರು ಉಪಸ್ಥಿತರಿದರು.