ತಾಳಿಕೋಟೆ: ಸಹಕಾರಿ ಬ್ಯಾಂಕ್‌ಗಳ ಬೆಳವಣಿಗೆಗೆ ರಜಪೂತ ಸಮಾಜದ ಸಹಕಾರ ಅಪಾರವಾಗಿದೆ ಎಂದು ದಿ. ತಾಳಿಕೋಟಿ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಹೇಳಿದರು.
ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾಭವನದಲ್ಲಿ ಶುಕ್ರವಾರ ನಡೆದ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕ ಮಂಡಳಿಗಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ರಜಪೂತ ಸಮಾಜ ಚಿಕ್ಕದಾಗಿದ್ದರೂ ಚೊಕ್ಕದಾಗಿದೆ. ಬ್ಯಾಂಕ್ ಸ್ಥಾಪನೆಯಿಂದ ರಜಪೂತ ಸಮಾಜದ ಹಿರಿಯರು ನಿರ್ದೇಶಕರಾಗಿ ಎಲ್ಲ ಸದಸ್ಯರಿಗೂ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆ ನಂತರ ಈಗ ಇಬ್ಬರು ಸದಸ್ಯರು ಆಯ್ಕೆಗೊಂಡಿದ್ದಾರೆ. ಎಲ್ಲ ಸಮಾಜ ಬಾಂಧವರೊಂದಿಗೆ ಹೊಂದಿರುವ ಪ್ರೀತಿ, ವಿಶ್ವಾಸವೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಶಿಕ್ಷಕ ರಾಜು ವಿಜಾಪೂರ, ಸಹಕಾರಿ ಬ್ಯಾಂಕ್ ನಿರ್ದೇಶಕ ಮುರುಗೆಪ್ಪ ಸರಶೆಟ್ಟಿ ಮಾತನಾಡಿದರು.
ರಜಪೂತ ಸಮಾಜ ವತಿಯಿಂದ ತಾಳಿಕೋಟಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡ 13 ಜನ ಸದಸ್ಯರನ್ನು ಸನ್ಮಾನಿಸಲಾಯಿತು.
ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು.
ಸಮಾಜದ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಗಣ್ಯರಾದ ವಿ.ಸಿ. ಹಿರೇಮಠ(ಹಂಪಿಮುತ್ಯಾ), ಕಾಶಿನಾಥ ಮುರಾಳ, ಜಗದೀಶ ಬಿಳೇಭಾವಿ, ಮುತ್ತು ಕಶೆಟ್ಟಿ, ರವಿ ಚಂದುಕರ, ಮುತ್ತುಗೌಡ ಪಾಟೀಲ, ದತ್ತು ಉಭಾಳೆ, ವಜ್ರಕುಮಾರ ಪ್ರಥಮಶೆಟ್ಟಿ, ವಾಸುದೇವ ಹೆಬಸೂರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಭರತಸಿಂಗ್ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ಅರುಣ ದಡೇದ, ನೀತಿನ ಹಜೇರಿ, ಅಮೀತ್‌ಸಿಂಗ್ ಮನಗೂಳಿ, ದಿಲಿೀಪಸಿಂಗ್ ಹಜೇರಿ, ಸುರೇಶಸಿಂಗ್ ಹಜೇರಿ, ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ, ನಿರ್ದೇಶಕರುಗಳಾದ ಡಿ.ಕೆ. ಪಾಟೀಲ, ಪ್ರಹ್ಲಾದಸಿಂಗ್ ಹಜೇರಿ, ಸುರೇಶ ಪಾಟೀಲ, ಐ.ಬಿ. ಬಿಳೇಭಾವಿ ಇತರರಿದ್ದರು.