ಜಿಲ್ಲೆ

ಅರಣ್ಯ ರಕ್ಷಣೆಗೆ ಸ್ಥಳೀಯರ ಸಹಕಾರ ಅಗತ್ಯ

ಸಿದ್ದಾಪುರ: ಕಾನನ ರಕ್ಷಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸ್ಥಳೀಯರೂ ಸಹ ಸಹಕಾರ ನೀಡಬೇಕು. ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡುವುದರ ಜತೆಗೆ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ರಕ್ಷಣೆ ಮಾಡಬೇಕೆಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಅರೇಹಳ್ಳ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿಯಿಂದ ನಿರ್ವಿುಸಲಾದ ಪರಿಸರ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ವಸಂತ ರೆಡ್ಡಿ ಮಾತನಾಡಿ, ಗ್ರಾಮ ಅರಣ್ಯ ಸಮಿತಿಯ ಮೂಲ ಉದ್ದೇಶವನ್ನು ಜನಸಾಮಾನ್ಯರು ಸದುಪಯೋಗ ಪಡೆದುಕೊಳ್ಳಬೇಕು. ಅರಣ್ಯ ನಾಶದಿಂದ ಹವಾಮಾನ ವೈಪರಿತ್ಯ ಉಂಟಾಗುವುದನ್ನು ತಡೆಗಟ್ಟಲು ಅರಣ್ಯ ಸಮಿತಿಯ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶ ಹಂಚಿಕೆ ಮಾಡಲಾಯಿತು.

ಅರೇಹಳ್ಳ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರವಿ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರೀಶ ಸಿ.ಎನ್, ಪ್ರವೀಣ ಬಸ್ರೂರ, ಕೆ.ಜಿ.ಪ್ರಕಾಶ, ಆರ್​ಎಫ್​ಒ ಶಿವಾನಂದ ನಿಂಗಾಣಿ,ಕಾನಸೂರು ಗ್ರಾಪಂ ಅಧ್ಯಕ್ಷೆ ಅನಿತಾ ನಾಯ್ಕ, ಸದಸ್ಯೆ ರಾಧಾ ಹರಿಜನ ಇತರರಿದ್ದರು.

ಉಪವಲಯ ಅರಣ್ಯಾಧಿಕಾರಿ ಉಷಾ ಬೈಂದೂರು ಸ್ವಾಗತಿಸಿದರು. ಡಿಆರ್​ಎಪ್​ಒ ವಿಶ್ವನಾಥ ನಾಯ್ಕ ವಂದಿಸಿದರು.

ಕಾಲೇಜು ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಭೆ

ತಾಲೂಕಿನ ಬೇಡ್ಕಣಿ-ತ್ಯಾರ್ಸಿ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಕಾಲೇಜು ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಭೆ ನಡೆಸಿ ಪ್ರಸಕ್ತ ವರ್ಷದಿಂದ ಆರಂಭವಾಗಿರುವ ಬಿಎಸ್​ಸಿ ಹಾಗೂ ಬಿಸಿಎ ತರಗತಿಗಳ ಕುರಿತು ತಾಲೂಕಿನ ಎಲ್ಲ ಪಿಯು ಕಾಲೇಜಿಗೆ ಭೇಟಿ ನೀಡಿ ಮಾಹಿತಿ ನೀಡುವಂತೆ ಕಾಲೇಜಿ ಪ್ರಚಾರ್ಯರಿಗೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ಗುಣಮ್ಟದ ಶಿಕ್ಷಣ ನೀಡುವುದು ಉಪನ್ಯಾಸಕರ ಕರ್ತವ್ಯವಾಗಿದೆ. ಕಾಲೇಜಿಗೆ ತುರ್ತು ಅವಶ್ಯ ಇರುವ ಕ್ಯಾಂಟಿನ್ ಕುರಿತಂತೆ ಸದ್ಯ ಮೊಬೈಲ್ ಕ್ಯಾಂಟಿನ್ ಪ್ರಾರಂಭಕ್ಕೆ ಅವಕಾಶ ನೀಡಿ ನಂತರ ಪೂರ್ಣಪ್ರಮಾಣದ ಕ್ಯಾಂಟಿನ್ ಆರಂಭಿಸೋಣ ಎಂದು ಹೇಳಿದರು.

ಪ್ರಾಚಾರ್ಯು ಡಾ.ರಶ್ಮಿ ರ್ಕ ಕಾಲೇಜಿನ ಕುರಿತು ಮಾಹಿತಿ ನೀಡಿದರು.

ಕಾಲೇಜು ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ, ಸದಸ್ಯ ಕನ್ನೇಶ್ವರ ನಾಯ್ಕ,ಉಮೇಶ ನಾಯ್ಕ ಕಡಕೇರಿ, ಸುರೇಂದ್ರ ಗೌಡ,ಎಸ್.ಕೆ.ನಾಯ್ಕ ಕಡಕೇರಿ,ಅಬ್ದುಲ್ ಖಾದರ್ ಸಾಬ್ ಬೇಡ್ಕಣಿ,ಎಚ್.ಟಿ.ವಾಸು, ಮಲ್ಲಿಕ್ ಗೌಡ, ಗಿರಿಜಾ ಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಇತರರಿದ್ದರು.