ಜಿಲ್ಲೆ

ಪರಂಪರೆ ಉಳಿವಿಗೆ ಮಹಿಳೆ ಕೊಡುಗೆ ಅಪಾರ

ರೋಣ: ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಉಳಿವಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಆ ಕಾರಣದಿಂದಾಗಿಯೇ ಮಹಿಳೆ ಪೂಜ್ಯನೀಯ ಸ್ಥಾನ ಪಡೆಯುವಂತಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬಸಮ್ಮ ತಾಯಿ ಅವರ 20ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಧುನಿಕ ದಿನಮಾನಗಳಲ್ಲಿ ಗೃಹಿಣಿಯ ಜವಾಬ್ದಾರಿ ಹೆಚ್ಚುತ್ತಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಮಹಿಳೆಯರು ಶಿಕ್ಷಣವಂತರಾಗುವುದು ಮುಖ್ಯವಾಗಿದೆ. ಶರಣರ ತತ್ವಗಳನ್ನು ಎಲ್ಲ ಮಹಿಳೆಯರು ಪಾಲಿಸುವ ಮೂಲಕ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರಣರಾಗಬೇಕು ಎಂದರು.

ಗುಲಗಂಜಿಮಠದ ಗುರುಪಾದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜನನಿ ಮಹಿಳಾ ಮಂಡಳದ ಅಧ್ಯಕ್ಷೆ ಈರಮ್ಮ ಪಾಟೀಲ, ರೂಪಾ ಅಂಗಡಿ, ಅನ್ನಪೂರ್ಣಮ್ಮ ಪಾಟೀಲ, ಅನ್ನಪೂರ್ಣಮ್ಮ ನಾಡಗೌಡರ, ಗಿರಿಜಮ್ಮ ಪಾಟೀಲ, ಶಶಿಕಲಾ ಪಾಟೀಲ, ರೂಪ ಅಂಗಡಿ, ಶೋಭಾ ಮೇಟಿ, ಜ್ಯೋತಿ ಕುರಿಯವರ, ರಂಗಮ್ಮ ಭಜಂತ್ರಿ, ರೇಣುಕಾ ಕೊರ್ಲಹಳ್ಳಿ, ಲಕ್ಷ್ಮಿ ಗಡಗಿ, ಗೀತಾ ಕೊಪ್ಪದ, ವಿದ್ಯಾ ಬಡಿಗೇರ, ಯಮನಮ್ಮ ಜಮ್ಮನಕಟ್ಟಿ, ವಿದ್ಯಾ ದೊಡ್ಮನಿ ಇತರರಿದ್ದರು. ಪ್ರಮೀಳಾ ತೋಟಗಂಟಿ ನಿರೂಪಿಸಿ, ವಂದಸಿದರು.