ಸಿಂಧನೂರು ಗಂಗಾನಗರದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ನಗರಸಭೆ ಪ್ರಭಾರ ಪೌರಾಯುಕ್ತೆ ಕೆ.ಶ್ರುತಿ, ಸದಸ್ಯ ಶರಣಪ್ಪ ಉಪ್ಪಲದೊಡ್ಡಿ, ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಹುಡೇದ್, ಅರಣ್ಯಾಧಿಕಾರಿ ರುದ್ರಮುನಿ, 
ಜಿಲ್ಲೆ

ಜೀವರಾಶಿಗೆ ಪರಿಸರದ ಕೊಡುಗೆ ಅಮೂಲ್ಯ

ಸಿಂಧನೂರು: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮನೆಗೊಂದು ಸಸಿ ನೆಡುವ ಕೆಲಸವಾಗಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಗಂಗಾನಗರದ ಸಹಿಪ್ರಾ ಶಾಲಾ ಆವರಣದಲ್ಲಿ ವನಸಿರಿ ಫೌಂಡೇಷನ್, ನಗರಸಭೆ, ಸಾಮಾಜಿಕ ಅರಣ್ಯ ವಲಯ, ನ್ಯಾಷನಲ್ ಕಾಲೇಜ್ ಹಾಗೂ ಗವಿಸಿದ್ಧೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಂದು ಜೀವರಾಶಿಗೆ ಪರಿಸರ ಅಮೂಲ್ಯವಾದ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ವನಸಿರಿ ಫೌಡೇಷನ್ ಕಾರ್ಯ ಶ್ಲಾಘನೀಯ ಎಂದರು.

ನ್ಯಾಷನಲ್ ಕಾಲೇಜು ಪ್ರಾಚಾರ್ಯ ರಾಮಲಿಂಗಪ್ಪ, ಮುಖ್ಯಶಿಕ್ಷಕಿ ಸುಜಾತಾ, ದಂತ ವೈದ್ಯ ನವೀನ್, ಎಸ್ಡಿಎಂಸಿ ಅಧ್ಯಕ್ಷ ಖಾದರ್ ಬಾಷಾ, ಮಾಜಿ ಅಧ್ಯಕ್ಷ ಅಮರೇಗೌಡ, ಸಿಆರ್‌ಪಿ ಪ್ರಮೋದ, ಎನ್ನೆಸ್ಸೆಸ್ ಅಧಿಕಾರಿ ರವಿಕುಮಾರ ಮಸ್ಕಿ, ಪ್ರಮುಖರಾದ ಅಶೋಕ ಉಮಲೂಟಿ, ದೊಡ್ಡಪ್ಪಗೌಡ, ಡಾ.ಶರಣಬಸವ ಪಾಟೀಲ್ ದೇವರಡ್ಡಿ ಇತರರಿದ್ದರು.