ಜಿಲ್ಲೆ

ದೇಶಕ್ಕೆ ಯೋಧರ ಕೊಡುಗೆ ಮರೆಯುವಂತಿಲ್ಲ

ಅರಸೀಕೆರೆ: ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವಲ್ಲಿ ಯೋಧರ ಕೊಡುಗೆ ಮರೆಯುವಂತಿಲ್ಲ ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಚಂದ್ರಪ್ಪ ಹೇಳಿದರು.

ಮಕರ ಸಂಕ್ರಾಂತಿ ಅಂಗವಾಗಿ ನಗರದ ಹೊರ ವಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವದ ಹಂಗು ತೊರೆದು ಗಡಿ ರಕ್ಷಣೆ ಮಾಡುವ ಕೆಲಸದಲ್ಲಿ ತೊಡಗಿರುವ ಯೋಧರಿಗೆ ಉತ್ಸಾಹ ತುಂಬುವುದು ಎಲ್ಲರ ಕರ್ತವ್ಯವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜನರ ರಕ್ಷಣೆ ಸೇನೆಯ ಮೇಲಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಹಬ್ಬನಘಟ್ಟ ನವೀನ್‌ಕುಮಾರ್ ಮಾತನಾಡಿ, ಸಂಘದ ಕಚೇರಿ ನಿರ್ಮಾಣಕ್ಕಾಗಿ ನಗರದ ಹೊರವಲಯದಲ್ಲಿ ನೂತನ ನಿವೇಶನ ಖರೀದಿಸಿದ್ದು, ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕೆಲಸ ಆರಂಭಿಸಲಾಗುವುದು ಎಂದರು.

ಇತ್ತೀಚಿಗೆ ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದ ಯೋಧರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

ಮಾಜಿ ಸೈನಿಕರ ಕುಟುಂಬದವರು ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ನಿವೃತ್ತ ಯೋಧರು ತಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಂಡರು. ಸಂಘದ ಗೌರವಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ನಿರ್ದೇಶಕ ಮಹೇಶ್, ಹೊನ್ನೇಗೌಡ, ಹುಲಿಗೌಡ್ರು, ಶಿವಲಿಂಗಪ್ಪ, ರಮೇಶ್, ಸೋಮಶೇಖರ್, ಕಲ್ಯಾಣಪ್ಪ, ನಾಗಭೂಷಣ್, ಅಣ್ಣೇಗೌಡ, ವಿಜಯ್, ನಾಗರಾಜು, ಮಲ್ಲಿಕಾರ್ಜುನ್, ಹರೀಶ್, ಸಿದ್ದಪ್ಪ, ಅಮೋಘ, ಕುಮಾರ್, ಪುರುಷೋತ್ತಮ್, ಸುರೇಶ್, ಪ್ರವೀಣ್, ಶಿವಕುಮಾರ್, ದೇವರಾಜ್ ಇತರರು ಇದ್ದರು.