ಜಿಲ್ಲೆ

ಕನ್ನಡ ಉಳಿವಿಗೆ ಕನ್ನಡಪರ ಸಂಘಟನೆಗಳ ಕೊಡುಗೆ ಅನನ್ಯ

ಚೌಳಹಿರಿಯೂರು: ಎಲ್ಲ ಭಾಷೆಗಳನ್ನೂ ಕಲಿಯಬೇಕು. ಹಾಗೆಯೇ ಕನ್ನಡತನ ಉಳಿಸಿಕೊಳ್ಳಬೇಕು.ರಾಜ್ಯದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷೆಯನ್ನು ನಿಯಂತ್ರಿಸಲು ಕಸಾಪ ಹಾಗೂ ಕನ್ನಡಪರಸಂಘಟನೆಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ಕೆಪಿಎಸ್ ಶಾಲೆ ಹಿರಿಯ ಶಿಕ್ಷಕಎಚ್.ಎಂ.ರುದ್ರೇಶ್ ಹೇಳಿದರು.

ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಹೋಬಳಿ

ಘಟಕದ ಸೇವಾದೀಕ್ಷೆ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಪ್ರಕಾಶ್ಮಾತನಾಡಿ, ಜಿಲ್ಲೆಯಲ್ಲಿ ಕಸಾಪ ಘಟಕ ಕ್ರಿಯಾಶೀಲವಾಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.ರಾಜ್ಯದಲ್ಲೂ ಚಿಕ್ಕಮಗಳೂರು ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್.ಪರಮೇಶ್ ಮಾತನಾಡಿ, ಕನ್ನಡದ ನೆಲ, ಜಲ,

ಸಾಂಸ್ಕೃತಿಕ ಇವುಗಳನ್ನು ಉಳಿಸಿ ಬೆಳೆಸಲು ಕಸಾಪ ಶ್ರಮಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್

31ದಿನ 10 ಹೋಬಳಿಗಳಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ನವೆಂಬರ್‌ನಲ್ಲಿ

ಶಾಲಾ ಕಾಲೇಜಗಳಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಭಾಷಣ ಸ್ಪರ್ಧೆಯಲ್ಲಿ ಸಂಜನಾ ಪಾಟಿಲ್ ಪ್ರಥಮ, ಯುಕ್ತ ದ್ವಿತಿಯ, ರಾಧಾ ತೃತಿಯ ಸ್ಥಾನಗಳಿಸಿದರು.

ಜಿ.ಬಿ.ಓಂಕಾರಪ್ಪ, ಹೆಚ್.ಸಿ.ಮಹಲಿಂಗಪ್ಪ ,ನಿಕಟ ಪೂರ್ವ ಅಧ್ಯಕ್ಷ ಬಸವರಾಜ್, ನೂತನ ಅಧ್ಯಕ್ಷಹೆಚ್.ಎಮ್.ಅನಿಲ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜ್, ಸಾಹಿತಿ ಲಲಿತಾ ನಟೇಶ್,ಎಸ್‌ಡಿಎಂಸಿ ಉಪಾಧ್ಯಕ್ಷ ಕೃಷ್ಣಮೂರ್ತಿ, ರಂಗಕಲಾವಿದ ಮಲ್ಲಿಕಾರ್ಜುನ, ಜಿ.ಅಶೋಕ್‌ಕುಮಾರ್,ಗ್ರಾಪಂ ಮಾಜಿ ಅಧ್ಯಕ್ಷ ಶಿವಮೂರ್ತಪ್ಪ, ಹೊಬಳಿ ಕಸಾಪ ಕಾರ್ಯದರ್ಶಿ ಬಸವರಾಜ್,ಪಿ.ಕೆ.ನಾಗರಾಜ್, ಸಿ.ಜಿ.ಯೋಗೀಶ್ ಉಪಸ್ಥಿತರಿದ್ದರು.