ನೆಲಮಂಗಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಿದರು. ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ, ಮಾತೃಭೂಮಿ ಯುವಕರ ಸಂದ ಸಂಸ್ಥಾಪಕ ಡಾ.ಎಸ್​.ಬಾಲಾಜಿ, ರಾಜ್ಯ ಗೌರವಾಧ್ಯಕ್ಷ ರಮೇಶ್​, ಜಾನಪದ ಗಾಯಕ ಗುರುರಾಜ್​ ಹೊಸಕೋಟೆ ಇದ್ದರು. 
ಜಿಲ್ಲೆ

ಸಂಸ್ಕೃತಿ ಉಳಿಸುವಲ್ಲಿ ಸಂಘ-ಸಂಸ್ಥೆಗಳ ಕೊಡುಗೆ ಅಪಾರ

ನೆಲಮಂಗಲ: ಜಾನಪದ ಕಲೆ, ಸಾಹಿತ್ಯ, ಸಂಸತಿ ಉಳಿಸುವ ನಿಟ್ಟಿನಲ್ಲಿ ಸಂ&ಸಂಸ್ಥೆಗಳು ಮಹತ್ವದ ಪಾತ್ರವಹಿಸಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್​ಲಾಡ್​ ತಿಳಿಸಿದರು. ನಗರದ ಹರ್ಷ ಆಡಿಟೋರಿಯಂನಲ್ಲಿ ಮಾತೃಭೂಮಿ ಯುವಕರ ಸಂದಿಂದ 30ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಮಾತೃಭೂಮಿ 30ರ ಸಂಭ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಯುವ ಸಮುದಾಯ ಹೆಚ್ಚೆಚ್ಚು ಜಾಗೃತರಾಗಬೇಕು. ರಾಜ್ಯ ಸರ್ಕಾರ ಯುವ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಿದ್ದು, ನಿರಂತರವಾಗಿ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯೆ ನಾಗಲ್ಮ ಚೌಧರಿ ಮಾತನಾಡಿ, ಯುವ ಸಮುದಾಯ ಕಾನೂನು ಬಗ್ಗೆ ತಿಳಿದುಕೊಂಡು ಪ್ರಶ್ನೆ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು. ವಿದ್ಯೆಯೊಂದಿಗೆ ಮಾನವೀಯ ಮೌಲ್ಯ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಚಿಕ್ಕಮಂಗಳೂರು ಯುವ ಸಬಲೀಕರಣ ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ, ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್​.ಶಿವಕುಮಾರ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ನಗರಸಭೆ ಉಪಾಧ್ಯಕ್ಷ ಆನಂದ್​, ಮಾತೃಭೂಮಿ ಯುವಕರ ಸಂದ ಜಿಲ್ಲಾಧ್ಯಕ್ಷ ಪವನ್​ಕುಮಾರ್​, ಗ್ಯಾರಂಟಿ ಸಮಿತಿ ಅಧ್ಯೆ ನಾಗರತ್ನಮ್ಮ, ಉಪನ್ಯಾಸಕ ಮಾರುತಿ, ಉದ್ಯಮಿ ನಾಗೇಶ್​, ಕಲಾವಿದರಾದ ಸಿದ್ದಯ್ಯ, ಗಂಗಣ್ಣ, ಬೂದಿಹಾಲ್​ಕಿಟ್ಟಿ, ದೊಡ್ಡೇರಿಬೈಲಪ್ಪ ಇದ್ದರು.

ಎರಡು ಜಿಲ್ಲೆಗೆ ಒಂದು ಇಎಸ್​ಐ ಆಸ್ಪತ್ರೆಗೆ ಮನವಿ: ತಾಲೂಕಿನ ಸೋಂಪುರ ಹೋಬಳಿಯಲ್ಲಿ ಇಎಸ್​ಐ ಆಸ್ಪತ್ರೆ ಸ್ಥಾಪನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ನಾಗಲ್ಮ ಚೌಧರಿ, ಕೇಂದ್ರದ ನಿಬಂಧನೆಯಲ್ಲಿ 50 ಸಾವಿರ ಐಪಿ ಓಡರ್​ ಇದ್ದರೆ ಮಾತ್ರ ಇಎಸ್​ಐ ಆಸ್ಪತ್ರೆ ಮಾಡಲು ಸಾಧ್ಯ. ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಎರಡು ಜಿಲ್ಲೆಗೆ ಒಂದು ಇಎಸ್​ಐ ಆಸ್ಪತ್ರೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ : ವಿವಿಧ ಕ್ಷೇತ್ರದ 10 ಮಂದಿ ಸಾಧಕರಿಗೆ ಮಾತೃಭೂಮಿ ರಾಷ್ಟ್ರ ಪ್ರಶಸ್ತಿ, 20 ಮಂದಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ, 10 ಮಂದಿ ಮಾತೃಭೂಮಿ ಸೇವಾ ಪುರಸ್ಕಾರ ಸೇರಿ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.