ಜಿಲ್ಲೆ

ಧರ್ಮ ರಕ್ಷಣೆಗೆ ಜೈನ ಧಾರ್ವಿುಕ ಕೇಂದ್ರಗಳ ಕೊಡುಗೆ ಮಹತ್ತರ

ಹುಬ್ಬಳ್ಳಿ : ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗೆ ಜೈನ ಧಾರ್ವಿುಕ ಕೇಂದ್ರಗಳು ಮಹತ್ವದ ಕೊಡುಗೆ ನೀಡಿವೆ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿರುವ ಪಂಚಕಲ್ಯಾಣ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಅಂಗವಾಗಿ ಸೋಮವಾರದಂದು ಭಗವಾನ್ ಪಾರ್ಶ್ವನಾಥರ ನಿರ್ವಾಣ ಕಲ್ಯಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಜನರನ್ನು ಧರ್ಮದ ಮಾರ್ಗದಲ್ಲಿ ಕೊಂಡೊಯ್ದು, ಶಾಂತಿ, ಸಮಾಧಾನದಿಂದ ಬದುಕು ನಡೆಸಲು ಪ್ರೇರಣೆ ನೀಡುತ್ತಿದ್ದಾರೆ. ನವಗ್ರಹ ಕ್ಷೇತ್ರಕ್ಕೆ ಭೇಟಿ ನೀಡುವವರ ಮನಸ್ಸು ಧರ್ಮದ ಚಿಂತನೆಯತ್ತ ತಿರುಗುತ್ತದೆ. ಇಲ್ಲಿಯ ವಾತಾವರಣದಿಂದ ಶಾಂತಿ, ಸಮಾಧಾನಗಳು ನೆಲೆಸುತ್ತವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕಗುರು ಪೀಠಾಧಿಪತಿ ನಿರಂಜನಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿ ಇಲ್ಲದೇ ಮುಕ್ತಿ ಇಲ್ಲ. ಒಂದು ಇರುವೆಗೂ ತೊಂದರೆ ಕೊಡಲಾರದೇ ಬದುಕುವುದು ಎಷ್ಟು ಕಠಿಣ ಎಂಬುದು ಅದನ್ನು ಅನುಸರಿಸಿದವರಿಗಷ್ಟೇ ಗೊತ್ತು. ಇನ್ನೊಬ್ಬರಿಗೆ ಹಿಂಸೆ ಕೊಡುವುದು, ಕಷ್ಟ, ತೊಂದರೆ ಕೊಟ್ಟು ಸಂತೋಷಪಡುವವರ ವರ್ತಮಾನದ ಜಗತ್ತಿನಲ್ಲಿ ತಮ್ಮದೇ ಅಹಿಂಸಾ ತತ್ವವನ್ನು ಪ್ರಚಾರ, ಪ್ರಸಾರ ಮಾಡುತ್ತಿರುವ ಜೈನ ಧರ್ಮ ಮಾನವನ ಕಲ್ಯಾಣ ಬಯಸುವ ಧರ್ಮವಾಗಿದೆ ಎಂದು ಹೇಳಿದರು.

ಜೈನ ಮುನಿಗಳ ಬದುಕು ಬಲು ಕಠೋರ, ಅವರ ಜೀವನ ಪರಿಶ್ರಮದ್ದು. ಇಂಥ ತಪಸ್ಸು ಆಚರಣೆ ಜಗತ್ತಿನ ಯಾವ ಧರ್ಮಗಳಲ್ಲೂ ಇಲ್ಲ ಎಂದರು.

ಭಗವಾನ್ ಪಾರ್ಶ್ವನಾಥರ ನಿರ್ವಾಣ ಕಲ್ಯಾಣ : ಸನ್ಯಾಸ ದೀಕ್ಷೆ ನಂತರ ಧರ್ಮ ಪ್ರಚಾರದಲ್ಲಿ ತೊಡಗಿದ ಭಗವಾನ್ ಪಾರ್ಶ್ವನಾಥರ ಮೋಕ್ಷ ಕಲ್ಯಾಣ ಕಾರ್ಯಕ್ರಮವು ವೇದಿಕೆ ಮೇಲೆ ಆಗಮ ಶಾಸೊ್ತ್ರೕಕ್ತ ಮಂತ್ರ ಸಹಿತ ಧಾರ್ವಿುಕ ವಿಧಿ ವಿಧಾನಗಳು, ನೃತ್ಯ, ಗೀತಗಾಯನ, ಕೊಳಲು ವಾದನದೊಂದಿಗೆ ನೆರೆವೇರಿದವು.

ಪಾರ್ಶ್ವನಾಥರು ಸಮೆ್ಮೕಧ ಶಿಖರ ಏರುವುದು, ಅಲ್ಲಿ ಯೋಗಮಾರ್ಗದ ಮೂಲಕ ಪ್ರಾಣವಾಯು ನಿರೋಧ ಮಾಡುವುದು, ನಿರ್ವಾಣದ ನಂತರ ಕೆಳಗೆ ಬಿದ್ದ ಅವರ ಉಗುರು ಮತ್ತು ಕೂದಲುಗಳನ್ನು ಸೌಧರ್ಮ ಇಂದ್ರ ಸಂಗ್ರಹಿಸುವುದು, ನಿರ್ವಾಣ ಹೊಂದಿದ ನೆಲದ ಧೂಳನ್ನು ಹಣೆಗೆ ಹಚ್ಚಿಕೊಳ್ಳುವುದು, ಈ ಸ್ಥಳ ಸಿದ್ಧಸ್ಥಾನ ಎಂದು ಪ್ರಸಿದ್ಧಿ ಪಡೆಯುವುದು ಮೊದಲಾದ ದೃಶ್ಯಾವಳಿಗಳು ವೇದಿಕೆ ಮೇಲೆ ಅಭಿನಯಿಸಲ್ಪಟ್ಟವು. ಪಂಚಲೋಹ ಪ್ರತಿಮೆಗೆ ಉಪಸ್ಥಿತ ಆಚಾರ್ಯರು ಪುಷ್ಪಾಂಜಲಿ ಅರ್ಪಿಸಿದರು.

ಆಚಾರ್ಯ ಮಧುರಶಾಸ್ತ್ರಿ, ಪ್ರತಿಷ್ಠಾಚಾರ್ಯ ಶ್ರೀಮಂತರ ಪಂಡಿತ, ಅಜಿತ ಪಂಡಿತ ಮೊದಲಾದವರು ನಿರ್ವಾಣ ಕಲ್ಯಾಣ ಕಾರ್ಯಕ್ರಮ ನಡೆಸಿಕೊಟ್ಟರು.

ರಾಜಸ್ಥಾನ ಔರಾದಿಂದ ಆಗಮಿಸಿದ ಸೌರಭಸೇನ ಪಟ್ಟಾಚಾರ್ಯರು, ಧರ್ಮಸೇನ ಭಟ್ಟಾರಕ ಸ್ವಾಮೀಜಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರಮಣರು, ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.

ಮನಸೆಳೆದ ಸಂಗೀತ : ಮೋಕ್ಷ ಕಲ್ಯಾಣ ಕಾರ್ಯಕ್ರಮದ ನಂತರ ಪ್ರಸಿದ್ಧ ಗಾಯಕ ಸುರೇಶ ವಾಡಕರ ಅವರ ಗೀತ ಸಂಗೀತ ಕಾರ್ಯಕ್ರಮವು ಸೋಮವಾರದ ಪ್ರಮುಖ ಆಕರ್ಷಣೆಯಾಗಿತ್ತು. ಪತ್ನಿ ಪದ್ಮಶ್ರೀ ಮತ್ತು ಸಂಗಡಿಗ ವಾದ್ಯಗಾರರ ಜತೆಗೆ ಹಲವು ಸುಮಧರ ಗೀತೆಗಳನ್ನು ಹಾಡಿ ನೆರೆದ ಜನರನ್ನು ರಂಜಿಸಿದರು.

ನಿರೂಪಕಿ ಅನುಶ್ರೀ ಮತ್ತು ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರ ಸಂಗೀತ ಕಾರ್ಯಕ್ರಮ ನೋಡಲು ಸಭಾ ಮಂಟಪದಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಕುಮಾರ, ಉಪಾಧ್ಯಕ್ಷ ಶೀತಲ ಪಾಟೀಲ, ಕಾರ್ಯದರ್ಶಿ ಆಶಾ ಪ್ರಭು ಹಾಗೂ ಇತರರನ್ನು ಸನ್ಮಾನಿಸಲಾಯಿತು.

ವಜ್ರಕುಮಾರ, ವಿಮಲ ತಾಳಿಕೋಟಿ, ಮಹೇಂದ್ರ ಸಿಂಘಿ, ಎ.ಸಿ. ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.