ಜಿಲ್ಲೆ

ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸವಾಜದ ಕೊಡುಗೆ ಅಪಾರ

ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸವಾಜದ ಕೊಡುಗೆ ಅಪಾರ. ಹಾರಾಡಿ ಮಹಾಬಲ ಗಾಣಿಗರು ಡಾ.ಶಿವರಾಮ ಕಾರಂತರೊಂದಿಗೆ ತಿರುಗಾಟ ವಾಡಿದ್ದು ಯಕ್ಷಗಾನದ ಕಂಪನ್ನು ವಿಶ್ವದೆಲ್ಲೆಡೆ ಪಸರಿದ್ದರು ಎಂದು ಯಕ್ಷಗಾನ ವಿಮರ್ಶಕ ಎಸ್.ವಿ. ಉದಯಕುವಾರ ಶೆಟ್ಟಿ ತಿಳಿಸಿದರು.

ಸಾಸ್ತಾನದಲ್ಲಿ ಕೋಟ ಗಾಣಿಗ ಯುವ ಸಂಟನೆ ಮತ್ತು ಮಹಿಳಾ ಸಂಟನೆ ಆಶ್ರಯದಲ್ಲಿ ಭಾನುವಾರ ನಡೆದ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ವಾತನಾಡಿದರು.

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸವಾಜದ ಜಿಲ್ಲಾಧ್ಯಕ್ಷ ಉದಯ ಕುವಾರ್ ವಾತನಾಡಿ, ಸವಾಜವನ್ನು ಬಲಗೊಳಿಸಲು ಎಲ್ಲರೂ ಸಂಟಿತರಾಗಬೇಕು ಎಂದರು.

ಮುಂಬೈ ಉದ್ಯಮಿ ಯೋಗೀಂದ್ರ ಗಾಣಿಗ ಯಕ್ಷಗಾನದ ಹಿರಿಯ ಕಲಾವಿದ ಎಂ.ಎ.ನಾಯ್ಕ ಅವರಿಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಮಾಡಿದರು.

ಸವಾಜದ ವಿವಿಧ ಕ್ಷೇತ್ರದ ಸಾಧಕರು, ಎಸೆಸೆಲ್ಸಿ, ಪಿಯುಸಿ ಸಾಧಕರನ್ನು ಗೌರವಿಸಲಾಯಿತು. ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಬಹುವಾನ ವಿತರಿಸಲಾಯಿತು.

ಗಾಣಿಗ ಯುವ ಸಂಟನೆ ಅಧ್ಯಕ್ಷ ಗಿರೀಶ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇಣುಗೋಪಾಲ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಗಣೇಶ ಚೆಲ್ಲಮಕ್ಕಿ, ಗಾಣಿಗ ಯುವ ಸಂಟನೆ ಜಿಲ್ಲಾಧ್ಯಕ್ಷ ದಿನೇಶ ಗಾಣಿಗ ಕೋಟ, ಕೋಟ ಸಂಟನೆ ಗೌರವಾಧ್ಯಕ್ಷ ಪ್ರಶಾಂತ ಗಾಣಿಗ, ಸಂಪರ್ಕ ಸುಧಾ ಪತ್ರಿಕೆ ಸಂಪಾದಕ ಚಂದ್ರಶೇಖರ ಬೀಜಾಡಿ, ಮಹಿಳಾ ಸಂಟನೆ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ, ಹಾರಾಡಿ ಮಹಾಬಲ ಗಾಣಿಗರ ಕುಟುಂಬ ಸದಸ್ಯರಾದ ವಿಶ್ವನಾಥ ಗಾಣಿಗ, ಜನಾರ್ದನ ಬ್ರಹ್ಮಾವರ, ವಸಂತಿ ರಾಜು ಇದ್ದರು.

ಉಡುಪಿ ಜಿಲ್ಲಾ ಗಾಣಿಗ ಸವಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ ಪ್ರಸ್ತಾವನೆಗೈದರು. ಕೋಟ ಸಂಟನೆ ಖಜಾಂಚಿ ಆನಂದ ಗಾಣಿಗ ಸ್ವಾಗತಿಸಿದರು. ರಾಜೇಶ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.