ಜಿಲ್ಲೆ

ಗಾಂಧೀಜಿ, ಶಾಸಿಯರ ಕೊಡುಗೆ ಆಪಾರ

ಧಾರವಾಡ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತೀಜಿ ಅವರ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಡಾ.ಆರ್. ಚಿಟಗುಪ್ಪಿ ಹೇಳಿದರು.

ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್‌ಎಸ್ ಐಟಿಐ ಕಾಲೇಜು, ಜೆಎಸ್‌ಎಸ್ ಎಂಸಿಎ ಕಾಲೇಜು ಮತ್ತು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ ಶಾಸೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರು ಜನನಾಯಕರು, ಭಾರತೀಯ ವಕೀಲರು, ವಸಾಹತುಶಾಹಿ ವಿರೋಧಿ ಕಾರ್ಯಕರ್ತರು, ರಾಜಕೀಯ ನೀತಿ ಶಾಸ್ತ್ರಜ್ಞರಾಗಿದ್ದರು. ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಯಶಸ್ವಿ ಅಭಿಯಾನ ಮುನ್ನಡೆಸಲು ಅಹಿಂಸೆಯನ್ನೆ ಅಸವನ್ನಾಗಿ ಬಳಸಿದವರು ಎಂದರು. ಲಾಲ್ ಬಹದ್ದೂರ ಶಾಸೀ ಅವರು ದೇಶಕಂಡ ಅತಿ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ನಮ್ಮ ದೇಶದ 2ನೇಯ ಪ್ರಧಾನ ಮಂತ್ರಿ. ಗಾಂಧೀಜಿ ಅವರು ದೇಶವನ್ನು ವಿವಿಧ ಸತ್ಯಾಗ್ರಹಗಳ ಮೂಲಕ ಎಲ್ಲ ಸಂಕೋಲೆಗಳಿಂದ ಬಿಡಿಸಿ ಸ್ವಾತಂತ್ರ್ಯ ತಂದುಕೊಟ್ಟರೆ, ಲಾಲ್ ಬಹದ್ದೂರ ಶಾಸೀ ಅವರು ಸ್ವಾತಂತ್ರ್ಯ ನಂತರ ದೇಶವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬಲಿಷ್ಠಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.

ಶೃತಿ ಶೆಟ್ಟಿ, ವಿಭಾ ಮುಗಳಿ, ಜ್ಯೋತಿ ಅಕ್ಕಿ, ರೋನಿಲ್ ಎಂ. ಇದ್ದರು. ಇದೇ ವೇಳೆ ಮಹಾವೀರ ಉಪಾಧ್ಯೆ ನಿರೂಪಿಸಿದರು. ವಿವೇಕ ಲಕ್ಷೇಶ್ವರ ವಂದಿಸಿದರು.