ವಿಜಯಪುರ ನಗರದ ಶ್ರೀ ರಾಮಚಂದ್ರ ಅಲಕುಂಟೆ ಪೆವಿಲಿಯನ್‌ನಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ಡೇ ದಿನಾಚರಣೆಯನ್ನು ಉದ್ಯಮಿ ಅಶೋಕ ತುಂಗಳ, ಗಣ್ಯರು ಉದ್ಘಾಟಿಸಿದರು. ರಾಜೇಶ ಕತ್ತಿ, ಅಭಿಷೇಕ ದೇಶಪಾಂಡೆ, ಪ್ರಕಾಶ ಕತ್ನಳ್ಳಿ, ನಾಗರಾಜ, ಶಾಜಿ ಕುರೆನ್ ಇತರರಿದ್ದರು. 
ಜಿಲ್ಲೆ

ದೇಶದ ಅಭಿವೃದ್ಧಿಗೆ ಇಂಜಿನಿಯರ್ ಕೊಡುಗೆ ಅಪಾರ

ವಿಜಯಪುರ: ತಾಂತ್ರಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇಂಜಿನಿಯರ್‌ರು ತಮ್ಮ ತೊಡಗಿಸಿಕೊಂಡಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಉದ್ಯಮಿ ಅಶೋಕ ತುಂಗಳ ಹೇಳಿದರು.

ನಗರದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಸಂಘದ ವತಿಯಿಂದ ಇತ್ತೀಚೆಗೆ ಅಲಕುಂಟೆ ನಗರದ ಶ್ರೀ ರಾಮಚಂದ್ರ ಅಲಕುಂಟೆ ಪೆವಿಲಿಯನ್‌ನಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ಡೇ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯವನ್ನೂ ಮಕ್ಕಳಲ್ಲಿ ಬೆಳೆಸುವುದು ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.

ಚಂದ್ರಯಾನ-3ರ ವಿಜ್ಞಾನಿಗಳ ತಂಡದ ಸದಸ್ಯರಲ್ಲೊಬ್ಬರಾದ ನಗರದ ಅಭಿಷೇಕ ದೇಶಪಾಂಡೆ ಮಾತನಾಡಿ, ದೇಶದ ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಶ್ರಮಪಟ್ಟು ಕಲಿಯುವಂತೆ ಸಲಹೆ ನೀಡಿದರು.

ಪ್ರಮುಖ ಪ್ರಾಯೋಜಕ ಸುಪ್ರೀಂ ಪೈಪ್ಸ್‌ನ ಪ್ರಕಾಶ ಕತ್ನಳ್ಳಿ ತಮ್ಮ ಕಂಪನಿಯ ಕಾರ್ಯಕ್ಷಮತೆ, ವಿವಿಧ ಉಪಕರಣಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು.

ಸಹ ಪ್ರಾಯೋಜಕ ಅಲ್ಟ್ರಾಟೆಕ್ ಸಿಮೆಂಟ್ಸ್‌ನ ನಾಗರಾಜ ತಮ್ಮ ಕಂಪನಿಯ ಮಾಹಿತಿ ನೀಡಿದರು. ಮತ್ತೊಬ್ಬ ಸಹ ಪ್ರಾಯೋಜಕ ಕಮಲ್ ಗ್ರೂಪಿನ ಶಾಜಿ ಕುರೆನ್ ಉಪಸ್ಥಿತರಿದ್ದರು.

ಸಂಘದ ವತಿಯಿಂದ ನಗರದ ಆರ್ಕಿಟೆಕ್ಟ್ ಸಂಘದ ಅಧ್ಯಕ್ಷ ರಾಜೇಶ ಕತ್ತಿ, ನಿವೃತ್ತ ಸುಪರಿಂಟೆಂಡೆಂಟ್ ಇಂಜಿನಿಯರ್ ರಾಜಶೇಖರ ಯಡಹಳ್ಳಿ, ಹಿರಿಯ ಗುತ್ತಿಗೆದಾರ ಎಸ್.ಸಿ. ಚಿಕ್ಕರಡ್ಡಿ, ನಗರದ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಖದ್ರಿನಾಯ್ಕರ, ಸಂಘದ ಹಿರಿಯ ಸದಸ್ಯರಾದ ಎಂ.ಎಸ್. ಅಂಗಡಿಮಠ, ಎಸ್.ಸಿ. ತೇಲಿ ಹಾಗೂ ಕಾರ್ಯಕ್ರಮ ಉಸ್ತುವಾರಿ ಹೊತ್ತಿದ್ದ ಸಂಘದ ಪದಾಧಿಕಾರಿಗಳಾದ ಪ್ರಕಾಶ ಚವ್ಹಾಣ, ಶೈಲೇಶ ಹುಂಡೇಕಾರ ಅವರನ್ನು ಸನ್ಮಾನಿಸಲಾಯಿತು.

ಅರುಣ ಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಶ್ರಫ್ ಕುಡಚಿ ವಾರ್ಷಿಕ ವರದಿ ಮಂಡಿಸಿದರು. ಸದಸ್ಯರಾದ ಸುಧೀರ ಟಂಕಸಾಲಿ, ಎಸ್.ವಿ. ಸಕ್ಕರಿ, ಎಂ.ಎಂ. ಬನೋಷಿ, ಎಸ್.ಎಸ್. ಹಿರೇಮಠ, ಎಸ್.ಸಿ. ತೇಲಿ, ನಿರ್ದೇಶಕ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು. ಕಟ್ಟಡ ಸಾಮಗ್ರಿಗಳ ನೂರಾರು ವಿತರಕರು ಪಾಲ್ಗೊಂಡಿದ್ದರು.
ಅಶೋಕ ರುಣವಾಲ ಭೋಜನ ಉಸ್ತುವಾರಿ ವಹಿಸಿದ್ದರು. ಸಿ.ಆರ್. ಗಂಗಾಧರ ಸ್ವಾಗತಿಸಿದರು. ಸುಭಾಷ್ ಜಂಬೂರೆ, ವಿಜಯಕುಮಾರ ಸೂರ್ಯವಂಶಿ ನಿರೂಪಿಸಿದರು. ಮಹೇಶ ರಾಂಪೂರ ವಂದಿಸಿದರು. ಕಟ್ಟಡ ಸಾಮಗ್ರಿಗಳ ಡೀಲರಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾದರು.