ಜಿಲ್ಲೆ

ನೆಮ್ಮದಿಯ ಬದುಕಿಗೆ ಪೌರ ಕಾರ್ಮಿಕರ ಕೊಡುಗೆ ಅಪಾರ

ಬಿಡದಿ: ಪೌರ ಕಾರ್ಮಿಕರು ಸ್ವಚ್ಛತೆ ಮಾಡದಿದ್ದರೆ ಪಟ್ಟಣ ಅಂದವಾಗಿ ಕಾಣುವುದಿಲ್ಲ. ಅಂತೆಯೇ, ಜನರು ನೆಮ್ಮದಿಯಿಂದ ವಾಸಿಸಲು ಕಾರ್ಮಿಕರ ಪಾತ್ರ ದೊಡ್ದದು ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಈಗಲ್​ಟನ್​ ರೆಸಾರ್ಟ್​ನಲ್ಲಿ ಬುಧವಾರ ರಾಜ್ಯ ಪೌರಸೇವಾ ನೌಕರರ ಸಂ, ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಮಹಾ ಸಂ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಕಾರ್ಮಿಕರ ಸಮಸ್ಯೆಗಳನ್ನು ಜನಪ್ರತಿನಿಧಿಗಳಾದ ನಾವು ಬಗೆಹರಿಸಬೇಕು. ಅವರಿಗೆ ಏನೇ ತೊಂದರೆಗಳು ಇದ್ದರೂ ಪ್ರತಿದಿನ ಮುಂಜಾನೆ ನಗರ, ಬಡಾವಣೆ ಸ್ವಚ್ಛತೆ ಕೆಲಸ ಮಾಡುತ್ತಾರೆ. ಹಾಗಾಗಿ ಅವರನ್ನು ಎಲ್ಲರೂ ಗೌರವಿಸಬೇಕು ಎಂದರು.

ಪುರಸಭೆ ನಿಕಟ ಪೂರ್ವ ಅಧ್ಯ ಎಂ.ಎನ್​.ಹರಿಪ್ರಸಾದ್​ ಮಾತನಾಡಿ, ನಮ್ಮ ಆರೋಗ್ಯದ ದೃಷ್ಟಿಯಿಂದ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಹಾಗಾಗಿ ಅವರ ಆರೋಗ್ಯವು ನಮಗೆ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಮಿಕರೆಗೆಲ್ಲ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.

ಪುರಸಭೆ ಸದಸ್ಯ ಸಿ.ಉಮೇಶ್​ ಮಾತನಾಡಿ, ಪ್ರತಿದಿನ ಜನರು ಮನೆಯಿಂದ ಹೊರ ಬರುವ ಮೊದಲೇ ಪೌರ ಕಾರ್ಮಿಕರು ಮನೆ ಬಾಗಿಲಿನಲ್ಲಿ ನಿಲ್ಲುತ್ತಾರೆ. ಅವರನ್ನು ಕೀಳಾಗಿ ನೋಡದೆ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು. ಪೌರ ಕಾರ್ಮಿಕರು ಹಾಗೂ ಇನ್ನಿತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರು ಹಲವು ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದರು.

ಪುರಸಭೆ ಸದಸ್ಯರಾದ ಶ್ರೀನಿವಾಸ್​, ನವೀನ್​ ಕುಮಾರ್​, ಎನ್​.ಕುಮಾರ್​, ಸಿ.ಆರ್​.ಮನು, ಬಿಂದ್ಯಾ, ಮಹಿಮಾ ಕುಮಾರ್​, ಮುಖ್ಯಾಧಿಕಾರಿ ಮೀನಾ, ಎಂಜಿನಿಯರ್​ ಗಳಾದ ಶ್ಯಾಮ್​, ಶಿಲ್ಪಾ, ನಮಸತಾ, ರೂಪಾದೇವಿ, ಶೃತಿ, ಸುಮಾ, ಕೃಷ್ಣ ನಾಯಕ್​, ಪೌರ ಕಾರ್ಮಿಕರ ಸಂದ ಜಿಲ್ಲಾಧ್ಯ ಛಲಪತಿ ಇತರರು ಇದ್ದರು.

ಗೈರಾದ ಜೆಡಿಎಸ್​ ಸದಸ್ಯರು ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಬಹುತೇಕ ಆಡಳಿತಾರೂಢ ಜೆಡಿಎಸ್​ ಸದಸ್ಯರು ಗೈರಾಗಿದ್ದರು. ಕಾರ್ಯಕ್ರಮದ ಬಗ್ಗೆ ಜೆಡಿಎಸ್​ ಸದಸ್ಯರ ಗಮನಕ್ಕೆ ತಾರದೆ ಏಕಪಯವಾಗಿ ಕೆಲವರು ನಿರ್ಧಾರ ಮಾಡಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದ್ದಾರೆ. ಬುಧವಾರ ಕಾರ್ಯಕ್ರಮ ನಿಗದಿ ಮಾಡಿ ಸೋಮವಾರ ಸಂಜೆ ನೋಟಿಸ್​ ಕೊಟ್ಟಿದ್ದಾರೆ. ಇದು ಎಷ್ಟು ಸರಿ ಎಂದು ಕೆಲ ಸದಸ್ಯರು ಪ್ರಶ್ನೆ ಮಾಡಿದರು.

ಪೌರ ಕಾರ್ಮಿಕರ ದಿನಾಚರಣೆ ಸಂಬಂಧ ನಮ್ಮ ಸದಸ್ಯರ ಜತೆಗಾಗಲಿ, ನನ್ನೊಂದಿಗಾಗಲಿ ಚರ್ಚೆ ಮಾಡಿಲ್ಲ. ಪುರಸಭಾ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡದೆ ನಮ್ಮ ಅಂಗಡಿಯ ಬಳಿ ಬಂದು ಕೆಲಸದ ಹುಡುಗನಿಗೆ ನೋಟಿಸ್​ ನೀಡಿ ೋಟೋ ತೆಗೆದುಕೊಂಡು ಹೋಗಿದ್ದಾರೆ. ಕನಿಷ್ಠ ಒಂದು ೋನ್​ ಕರೆ ಮಾಡಿ ಕೂಡ ಹೇಳಿಲ್ಲ. ಅವರಿಗಿಷ್ಟ ಬಂದ ಹಾಗೆ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುತ್ತದೆ. > ಲೋಹಿತ್​ ಕುಮಾರ್​ ಸ್ಥಾಯಿ ಸಮಿತಿ ಅಧ್ಯ, ಬಿಡದಿ ಪುರಸಭೆ