ಜಿಲ್ಲೆ

ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲ್ಲ, ಮಧ್ಯೆದಲ್ಲಿ ಎಕ್ಸಿಡೆಂಡ್ ಆಗಿ ಬೀಳುತ್ತೆ, ಯತ್ನಾಳ

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಐದು ವರ್ಷ ಹೋಗುವುದಿಲ. ಲೋಕಸಭಾ ಚುನಾವಣೆ ಬಳಿಕ ಅಥವಾ ಲೋಕಸಭಾ ಚುನಾವಣೆಗೂ ಪೂರ್ವ ಎಕ್ಸಿಡೆಂಡ್ ಆಗಿ ಬೀಳಲಿದೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಹೇಳಿದರು.
ಬೆಳಗಾವಿ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆ ಅವರು ಮಾತಮಾಡಿದರು.
ಸಿದ್ದರಾಮಯ್ಯ ಸಿಎಂ ಸ್ಥಾನ‌ಬಿಟ್ಟು ಕೊಡಿವುದಿಲ್ಲ. ಡಿಕೆಶಿ ಬಿಡುವುದಿಲ್ಲ. ಗ್ಯಾರಂಟಿಗಳ ಕಥೆಯೂ ಮುಗಿತು. ಇವರಿಗೆ ಗ್ಯಾರಂಟಿ ಕೊಡುವುದಕ್ಕೆ ಸಾಧ್ಯವಿಲ್ಲ. ಯಾವ ಸರ್ಕಾರ ಬಂದರೂ ಇವುಗಳನ್ನು ಮಾಡಲು ಆಗುವುದಿಲ್ಲ. ಗ್ಯಾರಂಟಿಗಳಿಂದ ಒಂದು ರೀತಿ ಕರ್ನಾಟಕದಲ್ಲಿ ಅರಾಜಕತೆ ಶುರುವಾಗಿದೆ. ಹಾಗಿದ್ದಿದ್ದರೆ ಬೊಮ್ಮಾಯಿ ಅವರು ಕೊಡುತ್ತಿದ್ದರು.
ಈ ಸರ್ಕಾರದಿಂದ ಪಾಕಿಸ್ತಾನದ ಧ್ವಜ ಹಾರಾಡುತ್ತಿವೆ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿವೆ. ಹಿಂದು ಧ್ವನಿಯನ್ನು ಕುಗ್ಗಿಸುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿದೆ. ದೇಶ ಉಳಿಯಬೇಕು, ಹಿಂದುಗಳು ಸುರಕ್ಷಿತವಾಗಿರಬೇಕೆಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ನಾವು ಎಲ್ಲದಕ್ಕೂ ತಯಾರಾಗಬೇಕು ಎಂದರು.
ಪಾಟ್ನಾದಲ್ಲಿ ಮೊನ್ನೆ ಕಳ್ಳರು, ಲಪಂಗರು ಸೇರಿ ದೇಶ ಹಾಳು ಮಾಡುವುದಕ್ಕೆ ವಿಚಾರಿಸಿದ್ದಾರೆಂದು ವಿಪಕ್ಷಗಳ ವಿರುದ್ಧ ಗುಡುಗಿದರು.
ಪಾಕಿಸ್ತಾನ ದಿವಾಳಿ ಆದಂತೆ ಭಾರತ ಮಾಡಲು ವಿಪಕ್ಷದವರು ಹೋರಟ್ಟಿದ್ದಾರೆ. ಭಾರತ ಪಾಕಿಸ್ತಾನ ಆಗಬೇಕಾ? ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ 5ನೇ ಆರ್ಥಿಕ ರಾಷ್ಟ್ರವಾಗಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತದೆ. 28ಕ್ಕೆ 28ಸ್ಥಾನ ಗೆದ್ದು ಪ್ರಧಾನಿ ಅವರಿಗೆ ಗೌರವ ಕೊಡಬೇಕಿದೆ ಎಂದರು.
ನಮ್ಮಲ್ಲಿಯ ಕೆಲವು ಅತೃಪ್ತ ಆತ್ಮಗಳು ಇವೆ. ನಮ್ಮವರನ್ನೇ ಸೋಲಿಸುವುದಕ್ಕೆ ಓಡಾಡಿದರು. ಆದರೆ, ಕ್ಷೇತ್ರಕ್ಕೆ ಹೋಗದೆ ನಾನು ಗೆದ್ದಿದ್ದೇನೆ. ಬಿಜೆಪಿಗೆ ಸೋಲಾಗಿದೆ ಎಂದು ನಾನು ಮತ್ತು ಬೊಮ್ಮಾಯಿಯವರು ಮನೆಯಲ್ಲಿ ಕುಳಿತುಕೊಂಡರೆ ಆಗುವುದಿಲ್ಲ.
ನಾವೆಲ್ಲರೂ ಕೂಡಿ ಇವತ್ತಿನಿಂದ ಕೆಲಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.