ಜಿಲ್ಲೆ

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ

ಜಿ.ಹೆಚ್. ಧನ್ಯಕುಮಾರ್

ಕಡೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಬಿ.ಕೆ.ಹೊಸೂರು ಗ್ರಾಮದ ಸಮೀಪ ಡಾ.ಅಂಬೇಡ್ಕರ್‌ಅಭಿವೃದ್ಧಿ ನಿಗಮದಿಂದ 2021-22, ಹಾಗೂ 23ನೇ ಸಾಲಿನ ಗಂಗಾ ಕಲ್ಯಾಣಯೋಜನೆಯಡಿ ಆಯ್ಕೆಯಾದ ಲಾನುಭವಿನಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುವುದಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳು ಸೇರಿ ಸರ್ಕಾರಕ್ಕೆ ಸುಮಾರು 59 ಸಾವಿರ ಕೋಟಿ ರೂ. ವೆಚ್ಚ ಹೊರೆಯಾಗಿದ್ದರೂ ಸಹ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿಯೂ ಹಿಂದೆ ಬೀಳುವ ಪ್ರಶ್ನೆ ಇಲ್ಲ. ಹಿಂದಿನ ಸರ್ಕಾರಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗಾಗಿ ಹಣ ನೀಡಲು ಸಿದ್ದರಾಮಯ್ಯ ಅವರು ಧೃಡ ಸಂಕಲ್ಪ ಮಾಡಿದ್ದಾರೆ ಎಂದರು.
ಈ ಹಿಂದೆ ಬಡ ರೈತರು ಸರ್ಕಾರದ ನೀರಾವರಿ ಸವಲತ್ತು ಪಡೆಯಲು ಅಂಬೇಡ್ಕರ್ ನಿಗಮ, ವೀರಶೈವ ನಿಗಮ, ಬೋವಿ ನಿಗಮ, ಉಪ್ಪಾರ ನಿಗಮ ಸೇರಿದಂತೆ ಮತ್ತಿತರ ನಿಗಮಗಳಿಗೆ ಗಂಗ ಕಲ್ಯಾಣಯೋಜನೆ ಪಡೆಯಲು ಅತಿ ಹೆಚ್ಚಾಗಿ ಅರ್ಜಿ ಸಲ್ಲಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈ ಎಲ್ಲ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಹಣದ ಹೊರೆಯಾದ ಕಾರಣ ಇವುಗಳಿಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನತೆಯಲ್ಲಿ ಹೊಸ ಚೈತನ್ಯ ಮೂಡಿದೆ ಎಂದರು.
ದೇವರಾಜು ಅಭಿವೃದ್ಧಿ ನಿಗಮದಿಂದ ಈಗಾಗಲೇ 102 ಕೊಳವೆ ಬಾವಿ ಕೊರೆಯಲಾಗಿದೆ. ಬಹಳಷ್ಟು ರೈತರು ತಮ್ಮ ಜನೀನುಗಳಲ್ಲಿ ನೀರು ಹರಿದ ಪರಿಣಾಮ ಸಂತಸದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಹೊಗರೇಹಳ್ಳಿ ನವೀನ್, ಗ್ರಾಮಸ್ಥರಾದ ರಮೇಶ್, ಪ್ರಕಾಶ್, ಶ್ರೀನಿವಾಸ್, ರವಿಕುಮಾರ್, ಓಂಕಾರ ಮೂರ್ತಿ, ರಾಜಪ್ಪ, ರಾಧ ಮತ್ತಿತರಿದ್ದರು.