ಮಡಿಕೇರಿ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿಯುತ್ತಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಶುರುವಾದ ಮಳೆ ಈ ಸೆಪ್ಟೆಂಬರ್‌ನಲ್ಲೂ ಮುಂದುವರಿದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರಸ್ತೆಗಳು ಹಾಳಾಗಿದೆ. ಶನಿವಾರಸಂತೆ-ಕೊಡ್ಲಿಪೇಟೆ, ಕೂಡಿಗೆ-ಸೋಮವಾರಪೇಟೆ ಸೇರಿದಂತೆ ಜಿಲ್ಲೆಯಾದ್ಯಂತ ಗ್ರಾಮೀಣ ರಸ್ತೆಗಳು ಮಾತ್ರವಲ್ಲದೆ ಪ್ರಮುಖ ಹೆದ್ದಾರಿಗಳೂ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಸೂಕ್ತವಲ್ಲದ ಸ್ಥಿತಿಯಲ್ಲಿದೆ.
ರಸ್ತೆ ಮಾತ್ರವಲ್ಲದೆ ಬಹುತೇಕ ಕಡೆಗಳಲ್ಲಿ ಸೇತುವೆಗಳೂ ಹಾಳಾಗಿದೆ. ಪಂಚಾಯತ್ ರಾಜ್ ವಿಭಾಗಕ್ಕೆ ಒಳಪಟ್ಟ ರಸ್ತೆಗಳೂ ಮಳೆಯಿಂದ ಹಾನಿಗೆ ಒಳಗಾಗಿವೆ. ಮಳೆಹಾನಿ ಸಂಬAಧಿತ ಕಾಮಗಾರಿಗಳಿಗೆ ಸೂಕ್ತ ಅನುದಾನ ಲಭ್ಯವಿದೆ ಎಂದು ಮುಖ್ಯಮಂತ್ರಿ ಆದಿಯಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರು ಹೇಳಿಕೆ ನೀಡುತ್ತಾ ಬಂದಿದ್ದರೂ ಎಲ್ಲಿಯೂ ಈತನಕ ಪೂರ್ಣ ಪ್ರಮಾಣದಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆದಿಲ್ಲ.
ಇತ್ತೀಚೆಗೆ ನಡೆದಿದ್ದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು 'ಮಳೆಹಾನಿ ಸಂಬAಧ ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ, ರಸ್ತೆ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದಾರೆ. ನಾನು ಹಲವು ಬಾರಿ ಭೇಟಿ ನೀಡಿದ್ದೇನೆ, ಕಂದಾಯ ಸಚಿವರು ಜಿಲ್ಲೆಗೆ ಆಗಮಿಸಿ ಹಲವು ನಿರ್ದೇಶನ ನೀಡಿದ್ದಾರೆ. ಆದರೂ ಸಹ ರಸ್ತೆ ಗುಂಡಿ ಮುಚ್ಚುವ ಕೆಲಸ ಆಗಿಲ್ಲ ಎಂದರೆ ಹೇಗೆ ?' ಎಂದು ಪ್ರಶ್ನೆ ಮಾಡಿದ್ದರು. ಮಳೆಹಾನಿ ಕಾಮಗಾರಿಯನ್ನು ಎಂಜಿನಿಯರ್‌ಗಳು ಗಂಭೀರವಾಗಿ ಪರಿಗಣಿಸಬೇಕು ಎಂದೂ ಸೂಚಿಸಿದ್ದರು. ಆದರೆ ಸಚಿವರ ಮಾತಿಗೂ ಮನ್ನಣೆ ಸಿಕ್ಕಿಲ್ಲ.
ಜಿಲ್ಲೆಯಲ್ಲಿ ಹಾಳಾಗಿರುವ ರಸ್ತೆಗಳ ಕಾರಣದಿಂದ ನಗರ ಪ್ರದೇಶಗಳಲ್ಲಿ ಪಾದಚಾರಿಗಳಿಗೂ ತಿರುಗಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ರಸ್ತೆ ದುರವಸ್ಥೆ ಕಾರಣಕ್ಕೆ ಕೆಲವು ಪ್ರದೇಶಗಳಿಗೆ ಆಟೋಗಳೇ ಬರುವುದಿಲ್ಲ. ಬಂದರೂ ದುಪ್ಪಟ್ಟು ಬಾಡಿಗೆ ವಸೂಲಿ ಮಾಡುತ್ತಾರೆ ಎನ್ನುವ ಆರೋಪವಿದೆ. ಕೆಟ್ಟ ರಸ್ತೆಯಲ್ಲಿ ವಾಹನ ಓಡಿಸುವುದರಿಂದ ಆಗಾಗ್ಗೆ ಮೆಕಾನಿಕ್‌ಗಳ ಬಳಿಗೆ ಹೋಗುವ ಸ್ಥಿತಿ ಇದೆ ಎಂದು ಚಾಲಕರು ಬೇಸರ ವ್ಯಕ್ತಪಡಿಸುತ್ತಾರೆ. ಪ್ರವಾಸಿ ಜಿಲ್ಲೆಯಾಗಿರುವ ಕೊಡಗಿಗೆ ಆಗಮಿಸುವ ಪ್ರವಾಸಿಗರೂ ಇಲ್ಲಿಯ ರಸ್ತೆ ದುರವಸ್ಥೆ ಬಗ್ಗೆ ಅಸಮಾಧಾನದ ಮಾತನ್ನಾಡುವುದೂ ನೋಡಬಹುದಾಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಜಿಲ್ಲೆಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದೆ. ಗ್ರಾಮೀಣ ರಸ್ತೆಗಳಿರಲಿ, ಹೆದ್ದಾರಿಗಳೇ ಗುಂಡಿಯಿAದ ಕೂಡಿದೆ. ವಾಹನ ಸವಾರರು ಕಷ್ಟದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ಇದೆ. ಆಟೋ ಚಾಲಕರ ಪಾಡಂತೂ ಹೇಳತೀರದು. ದುಡಿದದ್ದೆಲ್ಲಾ ರಿಪೇರಿಗೆ ಕೊಡುವಂಥ ಪರಿಸ್ಥಿತಿ ಆಗಿದೆ. ಮಳೆ ಕಡಿಮೆ ಆಗುತ್ತಿದ್ದು ಆದಷ್ಟು ಬೇಗ ರಸ್ತೆ ದುರಸ್ತಿ ಕಾರ್ಯ ನಡೆಯಲಿ.
ಮೊಹಮ್ಮದ್, ಅಧ್ಯಕ್ಷ, ಆಟೋ ಚಾಲಕರ ಸಂಘ, ಕುಟ್ಟ
ಜಿಲ್ಲೆಯಲ್ಲಿ ಈ ಬಾರಿ ಧಾರಾಕಾರ ಮಳೆಯಾಗಿದ್ದು ಇದರ ಪರಿಣಾಮವಾಗಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹರಿದು ರಸ್ತೆಗಳು ಹಾಳಾಗುತ್ತಿದೆ. ವಿರಾಜಪೇಟೆಯ ಮುಖ್ಯರಸ್ತೆ ಒಳಗೊಂಡAತೆ ತಾಲೂಕಿನ ಎಲ್ಲಾ ರಸ್ತೆಗಳು ಹಳ್ಳ ಬಿದ್ದಿದೆ. ವಾಹನ ಸವಾರರು ಹಳ್ಳ ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾಗುವ ವಾತಾವರಣ ಸೃಷ್ಟಿಯಾಗಿದೆ.
ರಕ್ಷಿತಾ ಬಿ.ಎಸ್., ವಿರಾಜಪೇಟೆ
ಮೂಲಭೂತ ಸೌಕರ್ಯಗಳಲ್ಲಿ ರಸ್ತೆಗೆ ಅತ್ಯಂತ ಮಹತ್ವದ ಸ್ಥಾನ. ಆದರೆ ಪ್ರತಿ ವರ್ಷವೂ ಮಳೆಗಾಲದಲ್ಲಿ ರಸ್ತೆಗಳು ಹಾಳಾಗುವುದು ಸಾಮಾನ್ಯ ಎಂಬAತಾಗಿದೆ. ಹಳ್ಳ ಬಿದ್ದು ಹಾಳಾದ ರಸ್ತೆಗಳು ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮಳೆಯ ನೀರು ಸೂಕ್ತವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡದಿರುವುದು ಹಾಗೂ ಮಳೆಗಾಲದ ಆರಂಭದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ಈ ಸಮಸ್ಯೆ ಎದುರಾಗುತ್ತದೆ.
ಎನ್.ಎಂ. ನಾಣಯ್ಯ, ವಿರಾಜಪೇಟೆ ನಿವಾಸಿ
ಕೊಡಗಿನ ಅನೇಕ ಪ್ರಮುಖ ರಸ್ತೆಗಳು ಗದ್ದೆಯಂತಾಗಿದೆ. ಮಳೆ ಸುರಿಯುವಾಗ ನಡು ರಸ್ತೆಯಲ್ಲಿ ನೀರು ತುಂಬಿಕೊಳ್ಳುವುದರಿAದ ರಸ್ತೆ ಯಾವುದು ಎಂದು ಕಾಣದ ಸ್ಥಿತಿ ಎದುರಾಗಿದೆ. ರಸ್ತೆ ಬದಿಯ ಕಾಡನ್ನು ಸಹ ಕೆಲವೆಡೆ ತೆರವುಗೊಳಿಸಿಲ್ಲ. ಗ್ರಾಮೀಣ ಭಾಗದ ರಸ್ತೆಯ ಸಮಸ್ಯೆ ಹೇಳತೀರದಂತಾಗಿದೆ. ರಸ್ತೆ ಗುಂಡಿಮಯವಾಗಿರುವುದರಿAದ ಆಗಿಂದಾಗ್ಗೆ ರಸ್ತೆ ಅಪಘಾತಗಳು ಸಂಭವಿಸುತ್ತಿರುತ್ತದೆ.
ಭುವನೇಶ್ವರಿ ಹರೀಶ್, ಮಾಜಿ ಅಧ್ಯಕ್ಷೆ, ಗ್ರಾಮ ಪಂಚಾಯತಿ, ಶನಿವಾರಸಂತೆ
ಈ ಮೊದಲೆಲ್ಲಾ ಮಳೆಗಾಲಕ್ಕೆ ಮುಂಚಿತವಾಗಿ ರಸ್ತೆಗೆ ಬಾಗಿರುವ ಮರದ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಇದರಿಂದ ಮಳೆಗಾಲದಲ್ಲಿ ರಸ್ತೆ ಗುಂಡಿಗಳಾಗುವುದು ತಪ್ಪುತ್ತದೆ. ಆದರೆ ಈಗ ಮಳೆಗಾಲಕ್ಕೆ ಯಾವುದೇ ತಯಾರಿ ಮಾಡಿಕೊಳ್ಳುವುದು ಕಂಡುಬರುತ್ತಿಲ್ಲ. ರಸ್ತೆ ಸರಿಪಡಿಸುವುದಿರಲಿ, ರಸ್ತೆ ಗುಂಡಿಮುಚ್ಚದಿರುವುದು ದುರಂತ. ಗ್ರಾಮೀಣ ಭಾಗದ ರಸ್ತೆಗಳು ತೀರ ಹದಗೆಟ್ಟಿದೆ.
ಪಿ.ಎನ್. ಗಂಗಾಧರ್, ಸದಸ್ಯ, ಗ್ರಾಮ ಪಂಚಾಯತಿ, ಆಲೂರುಸಿದ್ದಾಪುರ
ಮುಖ್ಯ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮಳೆ ಮುಂದುವರಿದಿರುವುದರಿAದ ದುರಸ್ತಿಗೊಳಿಸುವುದು ಕೂಡ ಈ ಸಂದರ್ಭದಲ್ಲಿ ಕಷ್ಟಕರ. ಆದ್ದರಿಂದ ಜನಪ್ರತಿನಿಧಿಗಳು, ಶಾಸಕರು ಈ ಬಗ್ಗೆ ಗಮನಹರಿಸಿ ಮಳೆ ನಿಂತ ಕೂಡಲೇ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಗುಣಮಟ್ಟದ ಕಾಮಗಾರಿ ನಡೆಸಿದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.
ಹೊಸೊಕ್ಲು ಮೊಣ್ಣಪ್ಪ, ಮಾಜಿ ಸೈನಿಕ, ಕಡಿಯತ್ತೂರು ಗ್ರಾಮ
ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿರುವುದರಿಂದ ಬಾಡಿಗೆಗೆ ಆಟೋ ಓಡಿಸುವುದು ಕಷ್ಟವಾಗಿದೆ. ಗ್ರಾಮ ಪಂಚಾಯಿತಿಗಳು ರಸ್ತೆ ದುರಸ್ತಿಗೆ ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಇಲ್ಲಿನ ಜನರ ಪಿತ್ತ ನೆತ್ತಿಗೆರುವಂತೆ ಮಾಡಿದೆ. ಇನ್ನಾದರೂ ಸಂಬAಧಪಟ್ಟವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.
ಪದ್ಮೇಶ್, ಅಧ್ಯಕ್ಷ, ಆಟೋ ಚಾಲಕರ ಸಂಘ, ಮಾಲ್ದಾರೆ
ಪ್ರಸಕ್ತ ವರ್ಷ ವಾಡಿಕೆ ಮಳೆಗಿಂತ ದುಪ್ಪಟ್ಟು ಮಳೆ ಸುರಿದಿದೆ. ತಾಲೂಕಿನ ಅನೇಕ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಸರ್ಕಾರದ ಮಳೆಹಾನಿ ಪರಿಹಾರ ಅನುದಾನವನ್ನು ಗ್ರಾಮೀಣ ರಸ್ತೆ ಅಭಿರುದ್ದಿಗೆ ಹೆಚ್ಚಿನದಾಗಿ ವಿನಿಯೋಗಿಸಬೇಕು. ಸರ್ಕಾರ ಕೊಡಗು ಜಿಲ್ಲೆಗೆ ವಿಶೇಷ ಠಿಚಿಛಿಞge ಕಲ್ಪಿಸಬೇಕು.
ಸಿ.ಎಸ್. ನಾಗರಾಜು. ಕೃಷಿಕ, ಚಿಕ್ಕತೋಳೂರು ಗ್ರಾಮ.
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 75 ಕಾಮಗಾರಿ ಕೈಗೊಳ್ಳಬೇಕು. ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಸುಮಾರು 3.46 ಕೋಟಿ ರೂ. ಅನುದಾನ ಬೇಕಿದೆ. ಸದ್ಯ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ನಡೆಸಲಾಗುತ್ತಿದೆ. ಅತಿವೃಷ್ಟಿಯಿಂದಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಸೇರಿದಂತೆ ಸುಮಾರು 76 ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ.
ಸಿದ್ದೇಗೌಡ, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ