ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಅಮೃತವಷಿರ್ಣಿ ಬಾನ್ಸುರಿ ಅಕಾಡೆಮಿ ವತಿಯಿಂದ ಸಂಗೀತ ಕಚೇರಿ ಹಾಗೂ ಹಿರಿಯ ಸಂಗೀತ ತಜ್ಞರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ನಗರದ ಆಲೂರು ವೆಂಕಟರಾವ ಭವನದಲ್ಲಿ ಜು. 9ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.
ಪಂ. ಮಲ್ಲಿಕಾರ್ಜುನ ತರ್ಲಟ್ಟಿ ಸಂಗೀತ ಕಾರ್ಯಕ್ರಮ ಉದ್ಘಾಟಿಸುವರು. ಪತ್ರಕರ್ತ ಹರ್ಷವರ್ಧನ ಶೀಲವಂತ ಅತಿಥಿಯಾಗಿ ಆಗಮಿಸುವರು. ಅನನ್ಯಾ ಪಾಮಡಿ ಸುಗಮ ಸಂಗೀತ ಪ್ರಸ್ತುತಪಡಿಸುವರು. ಕಲಾವಿದ ಉಸ್ತಾದ್ ಶೇಖ್ ಅಬ್ದುಲ್ಲಾ ಖಾಜಿ ಹಾಗೂ ಶಿಷ್ಯ ವೃಂದದ ಪರ ಮಣಿಕಂಠ ಕುಲಕಣಿರ್, ಜಯತೀರ್ಥ ಕುಲಕಣಿರ್, ಡಾ. ರಾಮ ಕೌಲಗುಡ್ಡ, ಶರ್ವ ಕೌಲಗುಡ್ಡ, ಸಾಕೇತ ಜೋಗಳೇಕರ, ರಿತು ಗುಮಾಸ್ತೆ, ಸಂತೋಷ ಶಿರಸಂಗಿ, ಪ್ರಮೋದ ಆಚಾರ್, ಸೌರಭ ತುರಮರಿ, ಸೃಜನ ಕುಲಕಣಿರ್, ಶ್ರೇಯಾ ಆಚಾರ್, ವರುಣ ಗುಡಿ ಬಾನ್ಸುರಿ ಪ್ರಸ್ತುತಪಡಿಸುವರು. ರಾಜಕುಮಾರ ಮೂಡಬಿ, ಮಳೆ ಮಲ್ಲೇಶ ಹೂಗಾರ ಹಾಗೂ ದಾಮೋದರ ಪಾಮಡಿ ತಬಲಾ ಸಾಥ್ ನೀಡಲಿದ್ದು, ಬಸವರಾಜ ಹೂಗಾರ ಸಂವಾದಿನಿ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.