ಜಿಲ್ಲೆ

ಕಠಿಣ ಪರಿಶ್ರಮದಿಂದ ಸಾಧಕರಾಗಿ: ಪ್ರೊ.ಜಿ.ಬಿ.ಶಿವರಾಜು ಸಲಹೆ


ಮೈಸೂರು:
ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ತ್ಯಾಗಗಳಿಂದ ಸಾಧಕರಾಗಬೇಕು ಎಂದು ಮಧ್ಯಪ್ರದೇಶದ ಕಸ್ತೂರ ಬಾ ಗಾಂಧಿ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಪ್ರೊ.ಜಿ.ಬಿ.ಶಿವರಾಜು ಸಲಹೆ ನೀಡಿದರು.


ಯುವರಾಜ ಕಾಲೇಜಿನ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಜ್ಞಾನವಾಹಿನಿಯ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಸಾಧನೆ ಮಾಡಬೇಕಾದರೆ ಸ್ಪಷ್ಟ ಗುರಿ ಇರಬೇಕು. ಜೀವನದಲ್ಲಿ ಸಾಧನೆ ಮಾಡುವ ಗುರಿ ಇದ್ದರೆ ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆಯಬಹುದು ಎಂದರು.
ನೃತ್ಯಗಿರಿ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ವಿದುಷಿ ಕೃಪಾ ಡ್ಕೆ, ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋದಾ, ಆಡಳಿತಾಧಿಕಾರಿ ಪ್ರೊ.ಎಚ್.ಸೋಮಶೇಖರಪ್ಪ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಬಿ.ಉಮೇಶ್, ಜ್ಞಾನವಾಹಿನಿ ಸಮಿತಿ ಸಂಚಾಲಕ ಜಿ.ಕೃಷ್ಣಮೂರ್ತಿ ಇದ್ದರು.