ಜಿಲ್ಲೆ

ನಗರದಲ್ಲಿ ಅಂತಾರಾಷ್ಟ್ರೀಯ ದರ್ಜೆ ಮಾದರಿ ಬೇಕು

ಅವಿನಾಶ್ ಜೈನಹಳ್ಳಿ

ಮೈಸೂರು: ನಗರದಲ್ಲಿ ಅಂತಾರಾಷ್ಟ್ರೀಯ ದರ್ಜೆ ಮಾದರಿ ಬೇಕು ಎಂದು ಉಪನ್ಯಾಸಕ ಡಾ.ಶಾಂತರಾಜು ಒತ್ತಾಯಿಸಿದ್ದಾರೆ.

ಮೈಸೂರು ನಗರ ವಿಶ್ವದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಬೆಂಗಳೂರಿನ ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವುದು ಇಲ್ಲಿಯೇ.

ಆದರೆ, ಸ್ಪರ್ಧಿಗಳಿಗೆ ಬೇಕಿರುವ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳವೇ ಇಲ್ಲ. ಇರುವ ಬೆರಳೆಣಿಕೆ ಕೊಳಗಳಲ್ಲೇ ಸಾವಿರಾರು ಜನ ಈಜಬೇಕಾಗಿದೆ. ಹಾಗಾಗಿ, ನಗರದಲ್ಲಿ ಹೆಚ್ಚಿನ ಈಜುಕೊಳ ನಿರ್ಮಾಣವಾಗಬೇಕಿದೆ.