ದೇವರ ಹಿಪ್ಪರಗಿ ಗ್ರಾಮೀಣ: ಪ್ರಸ್ತುತ ವಾತವಣದಲ್ಲಿ ಊರಿಗೊಂದು ವನ, ಗ್ರಂಥಾಲು ಮತ್ತು ಯೋಗಮಂದಿರದ ಅಗತ್ಯವಿದೆ ಎಂದು ಯಾಳವಾರ&ಹೆಡಗಾಪುರ ಮಠದ ಶ್ರೀದಾರುಕಲಿಂಗ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಯಾಳವಾರ ಗ್ರಾಮದ ಗುರು ಮಹಾಂತೇಶ್ವರ ಜಾತ್ರೆ ನಿಮಿತ್ತ ಶಿಕರ ಮಹೋತ್ಸವ, ನಮ್ಮೂರ ಉತ್ಸವ ಕಾರ್ಯಕ್ರಮದ ನೇತೃತ್ವ್ವ ವಹಿಸಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಜಾಲಹಳ್ಳಿ ಜಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಜಯ ಶಾಂತಲಿಂಗ ಶ್ರೀಗಳು ಮಾತನಾಡಿ, ಮಠ&ಮಂದಿರಗಳು ಸಮಾಜದ ಪರಿವರ್ತನಾ ಕೇಂದ್ರಗಳಾಗಿದ್ದು, ಮಾನವೀಯ ಮೌಲ್ಯಗಳನ್ನು ವೃದ್ಧಿಸುವುದರ ಜತೆ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತವೆ ಎಂದರು.
ಹೆಡಗಾಪುರದ ಶಿವಲಿಂಗೇಶ್ವರ ಸಂಸ್ಥಾನಮಠದ ಶ್ರೀ ಶಿವಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ದೇವರ ಹಿಪ್ಪರಗಿ ಪರದೇಶಿ ಮಠದ ಶ್ರೀಶಿವಯೋಗಿ ಸ್ವಾಮೀಜಿ, ಬಸವನಬಾಗೇವಾಡಿ ೇತ್ರ ಶಿಣಾಧಿಕಾರಿ ವಸಂತ ರಾಥೋಡ, ಸಂಸ್ಥೆ ಉಪಾಧ್ಯ ಶ್ರೀರಾಚೋಟೇಶ್ವರ ಸ್ವಾಮೀಜಿ, ಬೊಮ್ಮಲಿಂಗ ಸ್ವಾಮೀಜಿ, ಭೋಜಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಸೋಮೇಶ್ವರ ವಿದ್ಯಾವರ್ಧಕ ಸಂದ ಅಧ್ಯ ರಾಜುಗೌಡ ನಾಡಗೌಡ, ಮುಖಂಡರಾದ ಸಾಹೇಬಗೌಡ ದೊಡಮನಿ, ರಾಮನಗೌಡ ಪಾಟೀಲ, ಶಿಕ ಅಶೋಕ ಹಂಚಲಿ, ಶಿಕ ಬಾಪುಗೌಡ ಬಂಟನೂರು ಪಾಲ್ಗೊಂಡಿದ್ದರು.