The chariot festival of Shiva Sharan is complete. 
ಜಿಲ್ಲೆ

ಶಿವಶರಣರ ರಥೋತ್ಸವ ಸಂಪನ್ನ

ಗುಳೇದಗುಡ್ಡ: ಅಕ್ಕಲಕೋಟೆಯ ಚಿಕ್ಕ ರೇವಣಸಿದ್ಧ ಶಿವಶರಣರ ಮಠದ ರಥೊತ್ಸವ ಶನಿವಾರ ಭಕ್ತರ ಹರ್ಷೋದ್ಗಾರದ ನಡುವೆ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಜೆ 6:30ಕ್ಕೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನೆರವೇರಿಸಲಾಯಿತು.

ಆಳಂದದ ಶಿವಶರಣಮಠದ ಚನ್ನಬಸವಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ದಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು.