ಜಿಲ್ಲೆ

ಹೆಣ್ಣಿನ ಒಳನೋಟದ ಅಭಿವ್ಯಕ್ತಿ ಸವಾಲು: ಸಾಹಿತಿ ಕೆ.ವೈ. ನಾರಾಯಣಸ್ವಾಮಿ

ಬೆಂಗಳೂರು: ಹೆಣ್ಣಿನ ಒಳನೋಟದ ಸಂಗತಿಗಳನ್ನು ಏಕವ್ಯಕ್ತಿ ನಾಟಕದ ಮೂಲಕ ಪಾತ್ರವಾಗಿ ತೋರಿಸುವುದು, ಹೆಚ್ಚು ಲೇಖನಗಳನ್ನು ಬರೆಯುವುದು ಸೇರಿ ಮಹಿಳೆಯರು ನಾಟಕಗಳ ಪಾತ್ರಗಳನ್ನು ಮಾಡುತ್ತಿರುವ ಬಗ್ಗೆ ಅಧ್ಯಯನ ನಡೆಸುವುದು ಸವಾಲಾಗಿದೆ ಎಂದು ಸಾಹಿತಿ ಕೆ.ವೈ. ನಾರಾಯಣಸ್ವಾಮಿ ಹೇಳಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾವ್ಯಾ ಕಡಮೆ ರಚನೆಯ ‘ಸಂಜೀವಿನಿ ಸ್ಟೋರ್ಸ್’ ಎರಡು ನಾಟಕಗಳು, ‘ತೊಟ್ಟು ಕ್ರಾಂತಿ’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

‘ಸಂಜೀವಿನಿ ಸ್ಟೋರ್ಸ್’ ನಾಟಕದಲ್ಲಿನ ಪ್ರಯೋಗಶೀಲತೆ ನನ್ನನ್ನು ಆಕರ್ಷಿಸಿತು. ನಾಟಕಗಳನ್ನು ಬರೆಯುವವರು ಏನೆಲ್ಲ ತೊಡಕುಗಳನ್ನು ಎದುರಿಸಿದ್ದಾರೆ ಎಂಬುದಕ್ಕೆ ಕನ್ನಡದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಕಾವ್ಯಾ ಸಹ ಈ ಮಾತಿಗೆ ಹೊರತಲ್ಲ. ಆದರೆ ಮುಂದಿನ ದಿನಗಳಲ್ಲಿ ಕೃತಿಯಿಂದ ಕೃತಿಗೆ ಅನುಭವ ಗಳಿಸಿದ ಬಳಿಕ ಅವರಿಗೆ ಆ ಸಾಮರ್ಥ್ಯ ಸಹಜವಾಗಿಯೇ ದಕ್ಕುತ್ತದೆ ಎಂಬ ಮುನ್ಸೂಚನೆಗಳು ಪ್ರಸಕ್ತ ಕೃತಿಯಲ್ಲಿವೆ ಎಂದರು.

ಲೇಖಕಿ ದು. ಸರಸ್ವತಿ ಮಾತನಾಡಿ, ಕಥೆಗಳ ಬಂಧದಲ್ಲಿ ಕಾವ್ಯಾ ಅವರು ವೈಶಿಷ್ಟ್ಯ ಮೆರೆದಿದ್ದಾರೆ. ಒಟ್ಟಾರೆ ಒಂದೊಳ್ಳೆಯ ಕೃತಿಗಳನ್ನು ನೀಡಿದ್ದಾರೆ ಎಂದರು.