ಜಿಲ್ಲೆ

ಬಾಲಕಿ ಸಮನ್ವಿ ಸಾವಿಗೆ ಹೃದಯಾಘಾತ ಕಾರಣ

ಕುಂದಾಪುರ: ತಾಯಿಯೊಂದಿಗೆ ಶಾಲಾ ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭ ಕುಸಿದು ಬಿದ್ದು ಮೃತಪಟ್ಟ ಉಪ್ಪುಂದ ಖಾಸಗಿ ಶಾಲೆ ಎರಡನೇ ತರಗತಿ ವಿದ್ಯಾರ್ಥಿನಿ ಸಮನ್ವಿ(7) ಮರಣೋತ್ತರ ಪರೀಕ್ಷೆ ಬೈಂದೂರು ಪೊಲೀಸರ ಕೈಸೇರಿದೆ. ಸಾವಿಗೆ ಹೃದಯಾಘಾತ ಕಾರಣವಾಗಿದ್ದು, ಆಕೆಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೈಂದೂರು ತಾಲೂಕು ಬಿಜೂರು ಗ್ರಾಮ ಕಬ್ಸೆ ನಿವಾಸಿ ಕರುಣಾಕರ ಪೂಜಾರಿ - ಸುಪ್ರೀತಾ ಪೂಜಾರಿ ದಂಪತಿ ಪುತ್ರಿ ಸಮನ್ವಿ 2022, ಜು.20ರಂದು ತಾಯಿ ಸಮನ್ವಿ ಕರೆದುಕೊಂಡು ಬಸ್ ಬಳಿ ಬಂದಿದ್ದು, ಸಮನ್ವಿ ಕುಸಿದು ಬಿದ್ದಿದ್ದಳು. ತಕ್ಷಣ ಬೈಂದೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಳು.

ಬಾಲಕಿ ಚಾಕೋಲೇಟನ್ನು ಕವರ್ ಸಹಿತ ಬಾಯಿಗೆ ಹಾಕಿದ್ದು, ಅದು ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ವೈದ್ಯಕೀಯ ವರದಿ ನಂತರ ಸಮನ್ವಿ ಸಾವಿನ ನಿಜ ಕಾರಣ ಬಯಲಾಗಿದೆ.