ಕೋಲಾರ : ಹವಾಮಾನ ವೈಪರೀತ್ಯದಿಂದ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಬಾಧೆ ಹೆಚ್ಚಾಗಿದ್ದು, ಇದನ್ನು ಹತೋಟಿಗೆ ತರುವುದು ಬೆಳೆಗಾರರಿಗೆ ಸವಾಲಿನ ಕೆಲಸವಾಗಿದೆ. ತೋಟಗಾರಿಕೆ ಬೆಳೆಗಳಿಂದ ಕೈ ಸುಟ್ಟುಕೊಂಡಿದ್ದ ರೈತರು ಜೋಳ ಬೆಳೆದು ಸ್ವಲ್ಪಮಟ್ಟಿಗೆ ಆದಾಯ ಗಳಿಸುವ ಮಾರ್ಗ ಕಂಡುಕೊಂಡಿದ್ದರು. ಸೂಕ್ತ ಸಲಹೆ&ಸೂಚನೆ, ತಜ್ಞರ ಮಾರ್ಗದರ್ಶನವಿಲ್ಲದೆ ಔಷಧ ಅಂಗಡಿಗಳವರು ಶಿಾರಸು ಮಾಡಿದ ಕೀಟನಾಶಕ ಸಿಂಪಡಣೆ ಮಾಡಿದರೂ, ರೋಗ ಹತೋಟಿಗೆ ಬರುತ್ತಿಲ್ಲ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೆಕ್ಕೆ ಜೋಳ ಮತ್ತು ಸಿಹಿ ಜೋಳದ ಬಿತ್ತನೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸೈನಿಕ ಹುಳು ಬಾಧೆಯಿಂದಾಗಿ ಶೇ.22.13 ರಿಂದ 46.83 ಬೆಳೆಗೆ ಹಾನಿಯನ್ನುಂಟು ಮಾಡುತ್ತಿದೆ. ಜತೆಗೆ ಇತರ ರೋಗಗಳು ಸಹ ಹರಡುತ್ತಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ.
ಟೊಮ್ಯಾಟೊ, ಪಪ್ಪಾಯ, ಕ್ಯಾಪ್ಸಿಕಂ, ಆಲೂಗಡ್ಡೆ, ಬೀನ್ಸ್, ಕೋಸು, ಬದನೆಕಾಯಿ, ಬಜ್ಜಿ ಹೀಗೆ ಹಲವು ಬೆಳೆ ಬೆಳೆದ ನಂತರ ಕಟಾವು ಮಾಡಿದ ಮೇಲೆ, ಅದೇ ಜಮೀನಿನಲ್ಲಿ ಕಡಿಮೆ ಬಂಡವಾಳ ಹಾಕಿ ಲಾಭ ಗಳಿಸುವ ಉದ್ದೇಶದಿಂದ ಜೋಳ ಬೆಳೆದು ಉಪಾಯ ಕಂಡುಕೊಂಡಿದ್ದರು.
ಮೆಕ್ಕೆ ಜೋಳ ಬೆಳೆಗೆ ಪ್ರಮುಖವಾಗಿ ಹುಳಗಳ ಕಾಟ, ಚಿಗುರು ಕೊರಕ, ಕಾಂಡಕೊರೆಯುವ ಕೀಟ, ಉರಿಜಿಂಗಿ ರೋಗ, ಕೇದಿಗೆ ರೋಗ, ಕಾಂಡ ಕಪು$್ಪ ಕೊಳೆ ರೋಗ ಬರುತ್ತದೆ. ಆದರೆ, ಇತ್ತೀಚೆಗೆ ಲದ್ದಿಹುಳು ಬಾಧೆ ತೀವ್ರ ಕಾಡುತ್ತಿದ್ದು, ಇದನ್ನು ಹತೋಟಿಗೆ ತರುವುದೇ ಸವಾಲಾಗಿದೆ.
ಒಮ್ಮೆ ಜಮೀನಿನಲ್ಲಿ ಲದ್ದಿ ಹುಳು ಕಾಣಿಸಿಕೊಂಡರೆ ಅದು ಕೆಲವೇ ದಿನಗಳಲ್ಲಿ ಇಡೀ ಬೆಳೆಯನ್ನೇ ತಿಂದು ನಾಶ ಮಾಡುತ್ತದೆ. ಅದನ್ನು ನಿಯಂತ್ರಿಸಲು ಕಷ್ಟ, ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸತತವಾಗಿ ಮೂರು ವಾರಗಳಿಂದ ಆಗಾಗ ಮಳೆಯಾಗುತ್ತಿದ್ದು, ಮೋಡ ಮುಸುಕಿದ ವಾತಾವರಣವಿದೆ. ರೈತರ ತೋಟಗಳಿಗೆ ಬೆಂಗಳೂರಿನ ಜಿಕೆವಿಕೆಯ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಬಿ.ಸ್ವಾತಿ ನೇತೃತ್ವದ ತಂಡ ಭೇಟಿ ನೀಡಿ, ರೋಗ ನಿಯಂತ್ರಣ ಕುರಿತು ಅರಿವು ಮೂಡಿಸುತ್ತಿದ್ದಾರೆ.
ಹಾನಿಯ ಲಕ್ಷಣಗಳು : ಲದ್ದಿ ಹುಳು 6 ಹಂತಗಳಲ್ಲಿ ಲಗ್ಗೆ ಇಡುತ್ತದೆ. ಮೊದಲನೆಯ ಮೂರು ಹಂತದ ಹುಳುಗಳು ಚಿಕ್ಕದಾಗಿ ಗುಂಪುಗಳಲ್ಲಿದ್ದು ಎಲೆಗಳನ್ನು ಕೆರೆದು ತಿನ್ನುತ್ತವೆ. ಕ್ರಮೇಣ ಹಂತದ ಹುಳುಗಳು ಹಗಲಿನಲ್ಲಿ ಗಿಡದ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತಿಂದು ಎಲೆಯ ಮೇಲೆ ರಂಧ್ರಗಳನ್ನುಂಟು ಮಾಡುತ್ತದೆ.
ನಿರ್ವಹಣಾ ಕ್ರಮಗಳು : ಎಲೆಯ ಕೆಳ ಭಾಗದಲ್ಲಿ ಕೆನೆ ಬಣ್ಣದ ದುಂಡನೆಯಾಕಾರದ ಮೊಟ್ಟೆಗಳ ಮತ್ತು ಮರಿ ಹುಳುಗಳ ಗುಂಪುಗಳನ್ನು ಎಲೆ ಸಮೇತ ಕಿತ್ತು ನಾಶಪಡಿಸಬೇಕು. ಪ್ರತಿ ಎಕರೆಗೆ ಐದು ಲಿಂಗಾಕರ್ಷಕ ಬಲೆಗಳನ್ನು ಅಳವಡಿಸುವುದರಿಂದ ಹುಳುವಿನ ಪತಂಗಗಳನ್ನು ಆಕರ್ಷಿಸಿ ಕೊಲ್ಲಬಹುದು. ಬಿತ್ತನೆಯಾದ 25 ದಿನಗಳ ನಂತರ ಪ್ರತಿ ಎಕರೆಗೆ ಐದು ಟೆಕೊಗ್ರಾಮ ಪ್ರಿಟಿಯೋಸಮ್ ಪರಭಕ್ಷಕ ಕೀಟದ ಕಾರ್ಡ್ಗಳನ್ನು ಎಲೆಯ ಹಿಂಭಾಗದಲ್ಲಿ ಕಟ್ಟುವುದರಿಂದ ಹುಳುವಿನ ಮೊಟ್ಟೆಗಳನ್ನು ಪರಭಕ್ಷಕ ಕೀಟವು ತಿಂದು ಸಾಯಿಸುತ್ತದೆ ಎನ್ನುವುದು ವಿಜ್ಞಾನಿಗಳ ಮಾತು.
ಔಷಧ ಕ್ರಮಗಳೇನು...?
ಮೊದಲನೆಯ ಹಂತದ ಸಣ್ಣ ಹುಳುಗಳು ಕಂಡು ಬಂದಲ್ಲಿ ಪ್ರತಿ ಲೀ.ನೀರಿಗೆ 2 ಮೀ.ಲೀ ಅಜಾಡಿರೆಕ್ಟಿನ್ 10,000 ಪಿಪಿಎಂ ಸಿಂಪಡಣೆ ಮಾಡಬೇಕು. ಪ್ರತಿ ಲೀಟರ್ ನೀರಿಗೆ ಬ್ಯಾಸಿಲಸ್ ತೋರಿಂಜಿಯೆನ್ಸಿಸಸ್ವರ್, ಕುರ್ಸ್ತಾಕಿ 2 ಗ್ರಾಂ ಅಥವಾ ಮೆಟರೀಜಿಯಂರಿಲೆಯಿ 3 ಗ್ರಾಂ ಬೆರೆಸಿ ದ್ರಾವಣವನ್ನು ಗಿಡದ ಸುಳಿಗೆ ಸಿಂಪಡಿಸುವುದು.
0.2 ಗ್ರಾಂ ಎಮಾಮೆಕ್ಟಿನ್ ಜೋಯೇಟ್, 5 ಎಸ್ಜಿ ಅಥವಾ 0.2 ಮಿಮೀ ಸ್ಪೆ$ನೋಸ್ಯಾಡ್ 45 ಎಸ್ಸಿ, ಅಥವಾ ಸ್ಪೆ$ನಪಟಪರಾಮ್ 12 ಎಸ್ಸಿ ಅಥವಾ 0.2 ಮಿಸಿ ಕ್ಲೋರ್ಯಾಂಟ್ರಿನಿಲಿಪ್ರೋಲ್ 18.5 ಎಸ್ಸಿ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಂಡಣೆ ಮಾಡಬೇಕು ಎಂದು ಬೆಂಗಳೂರಿನ ಜಿಕೆವಿಕೆಯ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಬಿ.ಸ್ವಾತಿ ಸಲಹೆ ನೀಡಿದ್ದಾರೆ.