ಜಿಲ್ಲೆ

ಸಚಿವ ಪ್ರಭು ಚೌಹಾಣ್​ಗೆ ಸೇರಿದ ಕಾರು ಪಲ್ಟಿ: ಸ್ವಲ್ಪದರಲ್ಲೇ ಬಚಾವಾದ ಸಚಿವ

ಬೀದರ್​: ಸಚಿವ ಪ್ರಭು ಚೌಹಾಣ್​ ಅವರಿಗೆ ಸೇರಿರುವ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್​ ಬಳಿ ನಡೆದಿದೆ.

ಸಚಿವರು ಬೀದರ್​ನಿಂದ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಸರ್ಕಾರಿ ಗಾಡಿಯಲ್ಲಿ ಸಚಿವರು ಸಂಚರಿಸುತ್ತಿದ್ದು, ಅವರ ಸ್ವಂತ ಕಾರಾದ ಫಾರ್ಚುನರ್​ನಲ್ಲಿ ಅವರ ಗನ್​ ಮ್ಯಾನ್​ ಮತ್ತು ಕೆಲ ಕಾರ್ಯಕರ್ತರು ಪ್ರಯಾಣಿಸುತ್ತಿದ್ದರು. ರಸ್ತೆಯಲ್ಲಿ ಅವರ ಸ್ವಂತ ಕಾರಿನ ನಿಯಂತ್ರಣ ತಪ್ಪಿದ್ದು ಪಲ್ಟಿಯಾಗಿ ಬಿದ್ದಿದೆ.

ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳಾಗಿರುವುದು ವರದಿಯಾಗಿದೆ. (ದಿಗ್ವಿಜಯ ನ್ಯೂಸ್​)