ಹೊಳೆನರಸೀಪುರ: ಕೇಂದ್ರ ಸರ್ಕಾರದ ಸ್ವಚ್ಛತಾ ಆಂದೋಲನಕ್ಕೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿದ್ದು, ಇದು ಪೌರಕಾರ್ಮಿಕರ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಹೇಮಾವತಿ ದಡದ ವಾಯುವಿಹಾರ ಮಾರ್ಗದಲ್ಲಿ ಭಾನುವಾರ ಸ್ವಚ್ಚತೆಯೇ ಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನ ನಿಗದಿತ ಅವಧಿಗೆ ಸೀಮಿತವಾಗಬಾರದು. ಬದಲಾಗಿ ನಿರಂತರವಾಗಿರಬೇಕು. ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರನ್ನು ಗೌರವಿಸುವ ಕೆಲವಾಗಬೇಕು ಎಂದು ಹೇಳಿದರು.
ಪರ್ತಕರ್ತರ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ. ಸುರೇಶ್‌ಕುಮಾರ್, ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ. ಹೊನ್ನಪ್ಪ, ವರ್ತಕರ ಸಂಘದ ಅಧ್ಯಕ್ಷ ಕೆ.ಶ್ರೀಧರ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಮನೀಷ್ ಗಾಂಧಿ, ಸೇವಾದಳ ಅಧ್ಯಕ್ಷ ಎ. ಜಗನ್ನಾಥ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ರೋಟರಿ ಸಂಸ್ಥೆಯ ರಾಜಮುಡಿ ಮಂಜು, ಅಶೋಕ್, ವಿಜಿ, ಎಲೆಕ್ಟ್ರಾನಿಕ್ ಉಪಕರಣ ರಿಪೇರಿಗಾರರ ಸಂಘದ ಅಧ್ಯಕ್ಷ ಮುರಳೀಧರ ಗುಪ್ತ, ಪುರಸಭೆಯ ಪರಿಸರ ಇಂಜಿನಿಯರ್ ರುಚಿ ದರ್ಶಿಸಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಪುರಸಭಾ ಸದಸ್ಯ ನಿಂಗಯ್ಯ, ಮಾಜಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ತ್ರಿಲೋಚನಾ, ನಿವೃತ್ತ ಶಿಕ್ಷಕ ಹನುಂತರಾಜು, ಪುರಸಭೆಯ ಸ್ವಚ್ಛತಾ ಮೇಲ್ವಿಚಾರಕರಾದ ವೆಂಕಟೇಶ್, ಚಲುವ, ಮಾದಯ್ಯ ಇತರರಿದ್ದರು.