ಕುರಿಗಾಹಿ ಮಂಜುನಾಥ ಮಾದರ  
ಜಿಲ್ಲೆ

ಕುರಿಗಾಹಿ ಶವ ಪತ್ತೆ

ಮುದ್ದೇಬಿಹಾಳ: ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ನೀರು ಕುಡಿಯುವಾಗ ಜಾರಿ ಬಿದ್ದಿದ್ದ ಕುರಿಮರಿ ರಸಲು ಹೋಗಿ ಸೋಮವಾರ ಸಂಜೆ ನೀರು ಪಾಲಾಗಿದ್ದ ಮುದ್ದೇಬಿಹಾಳ ತಾಲೂಕು ನಾಗಬೇನಾಳ ಗ್ರಾಮದ ಕುರಿಗಾಹಿ ಮಂಜುನಾಥ ಮಾದರ (28) ಶವ ಬುಧವಾರ ಪತ್ತೆಯಾಗಿದೆ.

ನಾರಾಯಣಪುರ ಚೆಕ್​ಪೋಸ್ಟ್​ನಿಂದ 20&25 ಕಿ.ಮೀ. ದೂರದಲ್ಲಿರುವ ಯಾದಗಿರಿ ಜಿಲ್ಲೆ ನಾರಾಯಣಪುರ ಪೊಲೀಸ್​ ಠಾಣೆ ವ್ಯಾಪ್ತಿಯ ಹೊರಟ್ಟಿ ಗ್ರಾಮದ ಹತ್ತಿರ ಕಾಲುವೆಯಲ್ಲಿ ಶವ ದೊರಕಿದೆ.

ನಾರಾಯಣಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುದ್ದೇಬಿಹಾಳ ತಾಲೂಕು ಗಡಿ ಭಾಗದ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಘಟನೆ ನಡೆದಿತ್ತು.