ಅರಕಲಗೂಡು ತಾಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ನಾಲೆಗೆ ಬಿದ್ದಿದ್ದ ಮಗುವಿನ ಶವವನನ್ನು ಹೊರತೆಗೆದ ಸ್ಥಳಕ್ಕೆ ಶನಿವಾರ ತಹಸೀಲ್ದಾರ್ ಬಸವರೆಡ್ಡ ರೋಣದ ಭೇಟಿ ನೀಡಿ ಪರಿಶೀಲಿಸಿದರು.  
ಜಿಲ್ಲೆ

ನಾಲೆಯಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಶವ ಪತ್ತೆ

ಅರಕಲಗೂಡು: ತಾಲೂಕಿನ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುರನಹಳ್ಳಿ ಗ್ರಾಮದಲ್ಲಿ ಹಾರಂಗಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಐದು ವರ್ಷದ ಬಾಲಕಿ ಮೃತದೇಹ ಶನಿವಾರ ಪತ್ತೆಯಾಗಿದೆ.

ಗ್ರಾಮದ ರೇವಣ್ಣ, ಭಾಗ್ಯ ದಂಪತಿ ಪುತ್ರಿ ಎಂ.ಆರ್. ಸುಪ್ರಿತಾ ಶುಕ್ರವಾರ ಹಾರಂಗಿ ಬಲದಂಡೆ ನಾಲೆ ಬಳಿ ಆಟವಾಡುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕೊಚ್ಚಿಹೋಗಿದ್ದಳು.

ಅರಕಲಗೂಡು ಹಾಗೂ ಕೆ.ಆರ್. ನಗರ ಅಗ್ನಿ ಶಾಮಕ ಸಿಬ್ಬಂದಿ ಸಂಜೆವರೆಗೂ ಬಾಲಕಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಾಲೆಯಲ್ಲಿ ನೀರು ಕಡಿಮೆ ಮಾಡಿದ್ದರಿಂದ ಶನಿವಾರ ಬೆಳಗ್ಗೆ ಗ್ರಾಮದ ಬಳಿ ತೇಲುತ್ತಿದ್ದ ಶವವನ್ನು ಸ್ಥಳೀಯರು ಹೊರ ತೆಗೆದರು. ಈ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.