ಜಿಲ್ಲೆ

ಬೆಂಕಿಗಾಹುತಿಯಾದ ಪಾತಿ ದೋಣಿ

ಉತ್ತರ ಕನ್ನಡ ಡೆಸ್ಕ್

ಕುಮಟಾ: ತಾಲೂಕಿನ ಧಾರೇಶ್ವರದ ಸಮುದ್ರದಂಚಿನ ಶೆಡ್​ನಲ್ಲಿ ಇಟ್ಟಿದ್ದ ಸ್ಥಳೀಯ ತಿಮ್ಮಪ್ಪ ಗಣಪಯ್ಯ ಹರಿಕಾಂತ ಎಂಬುವರ ಪಾತಿ ದೋಣಿ ಹಾಗೂ ಅದರಲ್ಲಿದ್ದ ಮೀನುಗಾರಿಕೆ ಬಲೆ ಇತ್ತೀಚೆಗೆ ಬೆಂಕಿ ತಗುಲಿ ಸುಟ್ಟುಹೋದ ಬಗ್ಗೆ ಮಾಹಿತಿ ಲಭಿಸಿದೆ.

ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಿ ಪಂಚನಾಮೆ ಮಾಡಿದ್ದು, ಅಂದಾಜು 90 ಸಾವಿರ ರೂ. ಹಾನಿ ಅಂದಾಜಿಸಲಾಗಿದೆ. ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.