ಯಲ್ಲಾಪುರ: ಭಗವದ್ಗೀತೆಯು ಸರ್ವ ವೇದಗಳ ಮತ್ತು ಆಧ್ಯಾತ್ಮದ ಸಾರವಾಗಿದೆ. ಗೀತೆಯ ಪಠಣದಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾ ಪ್ರಮುಖ ಡಾ.ಶಂಕರ ಭಟ್ಟ ಬಾಲಿಗದ್ದೆ ಹೇಳಿದರು.
ತಾಲೂಕಿನ ಇಡಗುಂದಿಯ ರಾಮಲಿಂಗೇಶ್ವರ ದೇವಾಲಯದಲ್ಲಿ ಗೀತಾಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಗದ್ಗೀತಾ ಅಭಿಯಾನ ಸಮಿತಿ ತಾಲೂಕಾಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ ಮಾತನಾಡಿ, ಯಲ್ಲಾಪುರ ತಾಲೂಕಿನಾದ್ಯಂತ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೇಂದ್ರಗಳಲ್ಲಿ ಭಗವದ್ಗೀತಾ ಅಭಿಯಾನ ನಡೆದಿದೆ. ಗೀತಾಜಯಂತಿ ಆಚರಣೆಯೂ ಸಮಗ್ರ ಗೀತಾ ಪಾರಾಯಣದೊಂದಿಗೆ ಶ್ರದ್ಧಾಭಕ್ತಿಯಿಂದ ನಡೆದಿದೆ ಎಂದರು.
ಅಭಿಯಾನದ ಜಿಲ್ಲಾ ಸಂಚಾಲಕ ಕೆ.ಜಿ. ಬೋಡೆ, ಮಾತೃಮಂಡಳಿ ಅಧ್ಯಕ್ಷೆ ಪಾರ್ವತಿ ಸಣ್ಣೆಮನೆ, ದೇವಾಲಯದ ಆಡಳಿತ ಮಂಡಳಿಯ ಸದಸ್ಯ ತಿಮ್ಮಣ್ಣ ಭಾಗ್ವತ್, ಇತರರಿದ್ದರು. ಅರ್ಚಕ ಮಹೇಶ ಭಟ್ಟ ಹಾಗೂ ಚಂದ್ರಕಲಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.