????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಬಡವರ ನೆರವಿಗೆ ಮುಂದಾಗಿರುವುದು ಉತ್ತಮ ಕಾರ್ಯ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್

Bengaluru Rural

ಆನೇಕಲ್: ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ರೈತರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ನೂರಾರು ಮಂದಿ ದಾನಿಗಳು ನೆರವಿಗೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಹೇಳಿದರು.

ತಾಲೂಕಿನ ಬಳ್ಳೂರಲ್ಲಿ ಬೆಜೆಪಿ ಯುವ ಮುಖಂಡ ಬಳ್ಳೂರು ವಸಂತ್ ರೆಡ್ಡಿ ಆಯೋಜಿಸಿದ್ದ ಬಡವರಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದಲೂ 15 ಸಾವಿರ ಜನರಿಗೆ ಆಹಾರ ಧಾನದ ಕಿಟ್ ಹಾಗೂ ಪ್ರತಿ ದಿನ 6 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಅದೇ ರೀತಿ ಬಳ್ಳೂರು ವಸಂತ್ ಯುವ ಉತ್ಸಾಹಿಯಾಗಿದ್ದು, ಬಡವರ ಬಗ್ಗೆ ಅವರ ಕಾಳಜಿ ಮೆಚ್ಚುವಂತದ್ದು ಎಂದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಳ್ಳೂರು ವಸಂತ್‌ರೆಡ್ಡಿ ಮಾತನಾಡಿ, ಲಾಕ್‌ಡೌನ್ ಪ್ರಾರಂಭವಾದ ದಿನದಿಂದಲೂ ಪ್ರತಿದಿನ 1 ಸಾವಿರ ಮಂದಿಗೆ ಆಹಾರ ಪೂರೈಸಲಾಗುತ್ತಿತ್ತು. ನಂತರ ದಿನಗಳಲ್ಲಿ ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ, ದಾಸನಪುರ, ಭಕ್ತಿಪುರ, ಬಳ್ಳೂರು, ಹಾರೋಹಳ್ಳಿ ಸೇರಿ ಎಲ್ಲ ಗ್ರಾಮಗಳ ಬಡವರು, ಮಧ್ಯಮ ವರ್ಗದವರು, ದಿನಗೂಲಿಗಳನ್ನು ಗುರುತಿಸಿ 1700 ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ಮಾತನಾಡಿ, ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಗ್ರಾಮಗಳಲ್ಲೂ ಪಕ್ಷಭೇದವಿಲ್ಲದೆ ಜನರ ನೆರವಿಗೆ ಬಂದಿರುವುದು ಶ್ಲಾಘನೀಯ ಎಂದರು.

ಸಂಸದ ಎ.ನಾರಾಯಸ್ವಾಮ್ಮಿ ಮಾತನಾಡಿ, ಕಾಂಗ್ರೆಸ್ ನಾಯಕರು ಆಹಾರ ಹಂಚುವ ವಿಚಾರಕ್ಕೂ ಅಡ್ಡಗಾಲು ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ದೊಡ್ಡಹಾಗಡೆ ಎನ್.ಶಂಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ರಾಮಕೃಷ್ಣ, ಬಳ್ಳೂರು ಡೇರಿ ಅಧ್ಯಕ್ಷ ವೇಣು, ಮುಖಂಡರಾದ ಅರೇಹಳ್ಳಿ ಪ್ರಕಾಶ್, ರಾಜು, ಬಿ.ವಿ.ಆರ್.ಮಂಜುನಾಥ್ ಹಾಜರಿದ್ದರು.