ಜಿಲ್ಲೆ

ನೂತನ ಶ್ರೀ ಮಹಾವೀರ ಶಕೆ ಆರಂಭ

ಹುಬ್ಬಳ್ಳಿ : ಜೈನ ಪರಂಪರೆಯ 24 ನೆಯ ತೀರ್ಥಂಕರ, ಅಹಿಂಸೆ ಹಾಗು ಅನೇಕಾಂತವಾದದ ಅಗ್ರ ಪ್ರತಿಪಾದಕ ಭಗವಾನ್ ಮಹಾವೀರರು ಮೋಕ್ಷ ಹೊಂದಿ, ಈ ದೀಪಾವಳಿ ಅಮಾವಾಸ್ಯೆಗೆ 2,550 ವರ್ಷಗಳು ಪೂರ್ಣಗೊಳ್ಳುತ್ತವೆ.

ಅಮಾವಾಸ್ಯೆಯ ಪ್ರಭಾತ ಕಾಲದಲ್ಲಿ ವಿಶ್ವದ ಸಮಸ್ತ ಜೈನ ಬಾಂಧವರು ಶ್ರೀ ಮಹಾವೀರರ ನಿರ್ವಾಣ ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ನೆರವೇರಿಸುತ್ತಾರೆ. ಈ ಹಿನ್ನೆಲೆಯಲ್ಲಿ ನ. 2ರಂದು ದೀಪಾವಳಿ ಪಾಡ್ಯಕ್ಕೆ ನೂತನ ಶ್ರೀ ಮಹಾವೀರ ಶಕೆ 2,551 ಆರಂಭಗೊಳ್ಳುತ್ತದೆ.

ಜೈನ ಸಮಾಜದವರು ತಮ್ಮ ಮಂಗಲ ಕಾರ್ಯಗಳಲ್ಲಿ, ಧಾರ್ವಿುಕ ಆಯೋಜನೆಗಳಲ್ಲಿ ಶ್ರೀ ಮಹಾವೀರ ಶಕೆಯನ್ನು ನಮೂದಿಸುವ ಪರಿಪಾಠವನ್ನು ಹೊಂದಿದ್ದಾರೆ. ವರ್ತಮಾನದಲ್ಲಿ ಪ್ರಚಲಿತ ಶಕೆಗಳಲ್ಲಿ ಅತ್ಯಂತ ಪ್ರಾಚೀನ ಶಕೆ ಆಗಿದೆ ಎಂದು ಹುಬ್ಬಳ್ಳಿ ದಿಗಂಬಜ ಜೈನ ಸಮಾಜದ ಆಡಳಿತ ಮಂಡಳಿ ಸದಸ್ಯ ಶಾಂತಿನಾಥ ಹೋತಪೇಟೆ ತಿಳಿಸಿದ್ದಾರೆ.