ಹೆಬ್ರಿ: ಹೆಬ್ರಿ ತಾಲೂಕಿನ ಶ್ರೀ ಕ್ಷೇತ್ರ ದುರ್ಗ ಪ್ರಾಚೀನ ದೇವಾಲಯ. ಇಲ್ಲಿ ಚಾರಣ ಕಾರ್ಯಕ್ರಮದೊಂದಿಗೆ ಆಶು ಕವನ ಗೋಷ್ಠಿ ಕಾರ್ಯಕ್ರಮದ ಪರಿಕಲ್ಪನೆ ಮೂಲಕ ಸಾಹಿತ್ಯದ ಸೊಗಸು ಹೆಚ್ಚಿಸಿದೆ ಎಂದು ಶ್ರೀಕ್ಷೇತ್ರ ದುರ್ಗದ ಪ್ರಮುಖ ಸತೀಶ್ ಬಾಯರಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಆಶ್ರಯದಲ್ಲಿ ಹೆಬ್ರಿ ತಾಲೂಕಿನ ಪಶ್ಚಿಮ ಘಟ್ಟದ ಬೆಟ್ಟದಲ್ಲಿರುವ ಪ್ರಾಚೀನ ಅನ್ನಪೂರ್ಣೇಶ್ವರಿ ದೇವಾಲಯ ಶ್ರೀಕ್ಷೇತ್ರ ದುರ್ಗಕ್ಕೆ ಚಾರಣ ಮತ್ತು ದುರ್ಗದಲ್ಲೊಂದು ಆಶು ಕವನ ಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿಯ ಸಮನ್ವಯಕಾರರಾಗಿ ಮಂಜುನಾಥ ಕೆ.ಶಿವಪುರ ಸಹಕರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ರಾಧಕೃಷ್ಣ ರಾವ್, ಗಣೇಶ ಹಾಂಡ ಉಪಸ್ಥಿತರಿದ್ದರು. ಆಶುಕವನ ಗೋಷ್ಠಿಯಲ್ಲಿ ಕವಿಗಳಾದ ಮಹೇಶ ಹೈಕಾಡಿ, ಶೋಭಾ ಆರ್.ಕಲ್ಕೂರ್, ನವೀನ ಶೆಟ್ಟಿ ಮಡಾಮಕ್ಕಿ, ಬಾಲಚಂದ್ರ ಸುಬ್ಬಣ್ಣ ಕಟ್ಟೆ, ಬಾಲಚಂದ್ರ ಹೆಬ್ಬಾರ್, ಪುಪ್ಪಾವತಿ ಹೆಬ್ರಿ, ಸುಮಂಗಲಾ ಭಟ್, ಶ್ರೀಜನ್, ವಿದ್ಯಾಜನಾರ್ದನ್ ಭಾಗವಹಿಸಿದ್ದರು. ಶಿಕ್ಷಕಿ ರತ್ನಾವತಿ ಪ್ರಾರ್ಥಿಸಿದರು. ಮಹೇಶ ಹೈಕಾಡಿ ಸ್ವಾಗತಿಸಿದರು. ಎಚ್.ಜನಾರ್ದನ ವಂದಿಸಿದರು.