ಎಮ್ಮಿಗನೂರು ಎಸ್‌ಡಬ್ಲ್ಯುಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಂಭ್ರಮ ಶನಿವಾರ ಆಚರಣೆ ನಿಮಿತ್ತ ಮಾದಕ ವಸ್ತುಗಳ ದುರ್ಬಳಕೆ ತಡೆ ಜಾಗೃತಿ ಭಿತ್ತಿಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮುಖ್ಯಶಿಕ್ಷಕ ಮಂಜಪ್ಪ ಹೂಗಾರ, ಸಹ ಶಿಕ್ಷಕರಾದ ಎಂ.ಎಂ.ಜ್ಯೋತಿ, ಸಂಗಮ್ಮ, ಲಕ್ಷ್ಮೀ, ವೀರೇಶ, ರಾಜಾಸಾಬ್, ಮಲ್ಲೇಶ್ ಇತರರಿದ್ದರು. 
ಜಿಲ್ಲೆ

ಮಾದಕ ವಸ್ತುಗಳ ಬಳಕೆಯಿಂದ ಕೆಟ್ಟ ಪರಿಣಾಮ

ಕಂಪ್ಲಿ: ಎಮ್ಮಿಗನೂರಿನ ಎಸ್‌ಡಬ್ಲ್ಯುಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಶನಿವಾರ ಆಚರಿಸಲಾಯಿತು. ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯವಾಗಿ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದರು. ಮುಖ್ಯಶಿಕ್ಷಕ ಮಂಜಪ್ಪ ಹೂಗಾರ ಮಾತನಾಡಿ, ಅಮಲು ಬರಿಸುವ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ. ಆರ್ಥಿಕವಾಗಿ ದಿವಾಳಿಯಾಗುತ್ತಾನೆ. ಅಮಲು ವಸ್ತುಗಳ ಚಟದಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.