ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಶಾಲಾ ಶಿಕ್ಷಣ ಕಾರ್ಯಕ್ರಮ ಅಡಿ ಪ್ರತಿ ಬುಧವಾರ ಆಯೋಜಿಸುವ "ಜ್ಞಾನದೀಪ' ಮಕ್ಕಳಿಗೊಂದು ಜೀವನಪಾಠ ವೆಬಿನಾರ್ಗಳ ಕ್ರೂಢಿಕೃತ ವರದಿಯನ್ನೊಳಗೊಂಡ ಹೊತ್ತಿಗೆ ಹಣತೆ ಬಿಡುಗಡೆ ಸಮಾರಂಭವನ್ನು ಏ. 17ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿರ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಐಐಐಟಿ ನಿರ್ದೇಶಕ ಡಾ.ಮಹದೇವ ಪ್ರಸನ್ನ, ಉಮಾ ಹಂಪಣ್ಣವರ ಅತಿಥಿಗಳಾಗಿ ಆಗಮಿಸುವರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಿಇಒ ಸವಿತಾ ಸುಳಗೋಡು ಅಧ್ಯಕ್ಷತೆ ವಹಿಸುವರು.
ಪ್ರತಿ ಬುಧವಾರ ನಡೆಯುವ ವೆಬಿನಾರಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತಮ್ಮ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಮಕ್ಕಳ ಜತೆಗೆ ಪಾಲಕರೂ ವೆಬಿನಾರ್ ಆಲಿಸುತ್ತಿರುವುದು ವಿಶೇಷ. ಈ ಎಲ್ಲ ವಿಷಯಗಳನ್ನು ಸೇರಿಸಿ ಕೃತಿ ಸಿದ್ಧಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.