ಜಿಲ್ಲೆ

ಪರಶುರಾಮಪುರದಲ್ಲಿ ಕಲಾತಂಡಗಳ ಆಕರ್ಷಣೆ

ಪರಶುರಾಮಪುರ: ಪರಶುರಾಮಪುರವ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ತಾಲೂಕು ವಿವಿಧ ಗ್ರಾಮಗಳ ಘಟಕಗಳ ವತಿಯಿಂದ ಪರಶುರಾಮಪುರ ತಾಲೂಕು ಹೋರಾಟದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮದಲ್ಲಿ ಕಲಾತಂಡಗಳ ಮೆರವಣಿಗೆ ನಡೆಯಿತು.

ಚಳ್ಳಕೆರೆಯಲ್ಲಿ ಆಯೋಜಿಸಿದ್ದ ಪ್ರತಿಭಟನೆಗೆ ತೆರಳುವ ಮುನ್ನ ಗ್ರಾಮ ಮುಖ್ಯವೃತ್ತದಿಂದ ಗಾರುಡಿಗೊಂಬೆ, ವಿವಿಧ ಕಲಾ ತಂಡಗಳ ಮೆರವಣಿಗೆ ನಡೆಸಲಾಯಿತು.

ಗ್ರಾಪಂ ಅಧ್ಯಕ್ಷ ಜಗಳೂರಸ್ವಾಮಿ, ಉಪಾಧ್ಯಕ್ಷೆ ಸರೋಜಾಚಿತ್ತಯ್ಯ, ಮಾಜಿ ಅಧ್ಯಕ್ಷ ರುದ್ರೇಶ, ರಾಜ್ಯ ರೈತ ಸಂಘದ ಪ್ರದಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ, ತಾಲೂಕು ಅಧ್ಯಕ್ಷ ಕೆ ಚಿಕ್ಕಣ್ಣ, ಕಾರ್ಯ ಅಧ್ಯಕ್ಷ ಜೆಜೆಗುಂಟೆಹನುಮಂತರಾಯ, ಗೌರವಾಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಸಂಘಟಕ ವೆಂಕಟರಮಣಪ್ಪ, ತಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ, ಉಪಾಧ್ಯಕ್ಷ ಜಂಪಣ್ಣ, ಹೋಬಳಿ ಘಟಕದ ಅಧ್ಯಕ್ಷ ನವೀನಗೌಡ, ಉಪಾಧ್ಯಕ್ಷ ಪರಮೇಶಣ್ಣ, ಶಾಂತಣ್ಣ, ತಿಮ್ಮಣ್ಣ, ರತ್ನಪ್ಪ ವಿವಿಧ ಗ್ರಾಮಗಳ ರೈತರು ಗ್ರಾಮಸ್ಥರು ಇದ್ದರು.