ಗಂಗೊಳ್ಳಿ: ಗುಜ್ಜಾಡಿಯ ಬೆಣ್ಗೇರೆ ಶ್ರೀನಾಗ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಗಂಗೊಳ್ಳಿಯಿಂದ ತ್ರಾಸಿವರೆಗಿನ ಗ್ರಾಮಸ್ಥರು ನಾಗಮಂಡಲಕ್ಕೆ ತಮ್ಮಿಂದಾಗುವ ಸೇವೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ಬೆಣ್ಗೇರೆ ಶ್ರೀನಾಗ ದೇವಸ್ಥಾನ ಅಧ್ಯಕ್ಷ ಉಮೇಶ್ ಎಲ್.ಮೇಸ್ತ ಹೇಳಿದರು.
ದೇವಸ್ಥಾನ ವಠಾರದಲ್ಲಿ ಭಾನುವಾರ ಜರುಗಿದ ಅಷ್ಟಪವಿತ್ರ ನಾಗಮಂಡಲೋತ್ಸವ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.
ಪ್ರಧಾನ ಪುರೋಹಿತ ರಾಘವೇಂದ್ರ ಅಡಿಗ ನಾಯಕವಾಡಿ, ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ, ಗಂಗೊಳ್ಳಿ ಪರ್ಸಿನ್ ಬೋಟ್ ಮಾಲೀಕರ ಸಂಘ ಅಧ್ಯಕ್ಷ ರಾಘವೇಂದ್ರ ಮಡಿವಾಳ, ಪತ್ರಕರ್ತ ಬಿ.ರಾಘವೇಂದ್ರ ಪೈ, ಮದ್ದುಗುಡ್ಡೆ ಶ್ರೀ ನಾಗ ಜಟ್ಟಿಗೇಶ್ವರ ದೇವಸ್ಥಾನದ ಕಾರ್ಯದರ್ಶಿ ಪ್ರದೀಪ ಮೇಸ್ತ, ಗಂಗೊಳ್ಳಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಜಿ., ಬಿ.ಲಕ್ಷ್ಮೀಕಾಂತ ಮಡಿವಾಳ ಅಭಿಪ್ರಾಯ ಹಂಚಿಕೊಂಡರು.
ದೇವಸ್ಥಾನ ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ.ಮೇಸ್ತ, ಗೌರವಾಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ರಾಘವೇಂದ್ರ ವಿ.ಮೇಸ್ತ, ಬೆಣ್ಗೇರೆ ಖಾರ್ವಿ ಸಮಾಜ ಅಧ್ಯಕ್ಷ ಮೋಹನ ಖಾರ್ವಿ, ಮಡಿ ಶಂಕರ ಖಾರ್ವಿ, ಹರೀಶ ಮೇಸ್ತ, ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮಾ ವಿ.ಮೇಸ್ತ, ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಅಧ್ಯಕ್ಷ ವಿಶ್ವನಾಥ ವಿ.ಮೇಸ್ತ, ಕಾರ್ಯದರ್ಶಿ ರಾಮದಾಸ ಕೆ.ಮೇಸ್ತ ಉಪಸ್ಥಿತರಿದ್ದರು. ರಾಘವೇಂದ್ರ ವಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.