ಜಿಲ್ಲೆ

ಗಮಕ ಕಲೆ ಜ್ಞಾನ&ಭಾವಗಳ ಸಂಗಮ

ಬೆಳಗಾವಿ: ಸಾಹಿತ್ಯ, ಸಂಗೀತ, ಕಲೆಯ ಶ್ರೀಮಂತ ಪರಂಪರೆ ಸಹದಯರಿಗೆ ತಲುಪಿಸುವ ಗಮಕ ಕಲೆಯು ಜ್ಞಾನ&ಭಾವಗಳ ಸಂಗಮ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಪಿಎಂ ಉಷಾ ಮೇರು ಯೋಜನೆಯಡಿ ಕುಮಾರವ್ಯಾಸ ಕಾವ್ಯದ ಊರ್ವಶಿ ಶಾಪ ಪ್ರಸಂಗ ಕಾವ್ಯ ಭಾಗದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಗಮಕ ಕಾವ್ಯ ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುಮಾರವ್ಯಾಸ ಭಾರತದಲ್ಲಿ ಕನ್ನಡದ ಶ್ರೀಮಂತ ಸಂಸತಿಯ ಹೂರಣವಿದೆ. ಕಾವ್ಯದ ಅನುಸಂಧಾನ ನಮ್ಮ ಭವ್ಯ ಪರಂಪರೆ ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳು ಇಂತಹ ಮಹೋನ್ನತ ಕಾವ್ಯ ಓದಿದಾಗಲೇ ಅವರ ಬೌದ್ಧಿಕ ಚಿಂತನೆಗಳು ಪ್ರಬುದ್ಧವಾಗುತ್ತವೆ. ಯಗಾನ, ಗಮಕ, ನಾಟಕಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬಹುಮುಖ್ಯ ಎಂದರು.

ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ಗಮಕ ಕಲೆ ನಮ್ಮ ನೆಲದ ಸೊಬಗು. ಸಂಗೀತ ಮಾತ್ರವಲ್ಲದೆ ಸಾಹಿತ್ಯ ಮತ್ತು ವಾಚನಯೂ ಕಲೆಯಾಗಿದೆ ಎಂದರು. ಸಂಯೋಜಕಿ ಡಾ.ಶೋಭಾ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪಿಎಂ ಉಷಾ ಮೇರು ನೋಡಲ್​ ಅಧಿಕಾರಿ ಡಾ.ನಂದಿನಿ ದೇವರಮನಿ, ಪ್ರೊ.ಎಸ್​.ಎಂ.ಗಂಗಾಧರಯ್ಯ, ಡಾ.ಮಹೇಶ ಗಾಜಪ್ಪನವರ, ಡಾ.ಗಜಾನನ ನಾಯ್ಕ ಇತರರಿದ್ದರು.