ಎಲ್ಲೂರು ಶ್ರೀನಿವಾಸ್ ರಾವ್ ಸಂಗೀತ ನಿರ್ದೇಶನದ ಥಂಡರ್ ಕಿಡ್ಸ್ ತಂಡದ ಮಕ್ಕಳು ಹಾಡಿದ ಹಾಡುಗಳನ್ನು ಡಾ.ಜ್ಯೋತಿ ಚೇಳಾರು ಬಿಡುಗಡೆ ಮಾಡಿದರು. ಪ್ರೊ.ಪಿ.ಕೃಷ್ಣಮೂರ್ತಿ, ಸುಮಂಗಲಾ ರಾವ್, ಎಲ್ಲೂರು ಶ್ರೀನಿವಾಸ್ ರಾವ್, ರಘು ಇಡ್ಕಿದು ಮತ್ತಿತರರಿದ್ದರು. 
ಜಿಲ್ಲೆ

ಸಂಸ್ಕೃತಿಯಲ್ಲಿದೆ ಬದುಕು ಪ್ರೀತಿಸುವ ಕಲೆ, ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾರು ಅಭಿಮತ

ಮಂಗಳೂರು: ಮಕ್ಕಳಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಅಭಿರುಚಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ನಮ್ಮ ಮಣ್ಣಿನ ಗುಣಗಳನ್ನು ಮಕ್ಕಳು ಆವಾಹಿಸಿಕೊಂಡಾಗಲೇ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಉಂಟಾಗಿ ಬದುಕನ್ನು ಪ್ರೀತಿಸುವ ಕಲೆ ಸಿದ್ಧಿಸುತ್ತದೆ ಎಂದು ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾರು ಅಭಿಪ್ರಾಯಪಟ್ಟರು.

ಎಲ್ಲೂರು ಶ್ರೀನಿವಾಸ್ ರಾವ್ ಸಂಗೀತ ನಿರ್ದೇಶನದ ಥಂಡರ್ ಕಿಡ್ಸ್ ತಂಡದ ಮಕ್ಕಳು ಹಾಡಿದ ಹಾಡುಗಳನ್ನು ಕೆನರಾ ಕಾಲೇಜಿನಲ್ಲಿ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಅನುವಾದಿಸಿದ ‘ತಗೊರಿ ಮಿತ್ತ್‌ದ ಮಣ್ಣ್’ ತುಳು ಕವನಗಳ ಸಂಕಲನ ಬಿಡುಗಡೆಗೊಳಿಸಲಾಯಿತು. ಸುರತ್ಕಲ್ ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ‘ಸುರವಂದಿತ’ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದರು. ಕಾರ್ಪೊರೇಟರ್ ಸುಮಂಗಲಾ ರಾವ್ ಮಕ್ಕಳನ್ನು ಸನ್ಮಾನಿಸಿದರು.

ಮಕ್ಕಳ ವಾದ್ಯಗೋಷ್ಠಿಯಲ್ಲಿ ತಬಲ-ಆದ್ಯಾ, ಕೀಬೋರ್ಡ್-ಸ್ವಸ್ತಿಕ್, ಅಕ್ಷಜ್, ವಿನಮ್ರ ಇಡ್ಕಿದು, ಕೊಳಲು-ಸಚಿನ್, ವೀಣೆ-ಐಶ್ವರ್ಯಾ, ರಿದಂಪ್ಯಾಡ್-ಶಾಹಿಲ್, ಸ್ಯಾಕ್ಸೋಫೋನ್‌ನಲ್ಲಿ ಅರ್ಮನ್ ಸಹಕರಿಸಿದರು. ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್, ತಂಡದ ಕಾರ್ಯದರ್ಶಿ ರಘು ಇಡ್ಕಿದು, ಸಂಪರ್ಕಾಧಿಕಾರಿ ಕವಿತಾ, ಕಾರ್ಯಕಾರಿ ಸಮಿತಿ ಸದಸ್ಯೆ ಜಯಶ್ರೀ ಭಟ್, ಮಕ್ಕಳ ವಿಭಾಗದ ಸ್ವಸ್ತಿಕ್ ಭಟ್ ಉಪಸ್ಥಿತರಿದ್ದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.