ಜಿಲ್ಲೆ

ಕಳ್ಳಬಟ್ಟಿ ತಯಾರಿಸುತ್ತಿದ್ದ ಇಬ್ಬರ ಬಂಧನ

ಬೇಲೂರು: ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭಾನುವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ, ಇಬ್ಬರನ್ನು ವಶಕ್ಕೆ ಪಡೆದಿದೆ.

ತಾಲೂಕಿನ ಪುಟ್ಟೇನಹಳ್ಳಿಯ ಸ್ವಾಮಣ್ಣ ಹಾಗೂ ರಾಮಭೋವಿ ಬಂಧಿತರು. ಪುಟ್ಟೇನಹಳ್ಳಿ ಗ್ರಾಮದಲ್ಲಿ ಕಳ್ಳಬಟ್ಟಿ ತಯಾರಿಸುತಿದ್ದ ಸಂದರ್ಭ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ 4 ಲೀಟರ್ ಕಳ್ಳಬಟ್ಟಿ, 40 ಲೀಟರ್ ಬೆಲ್ಲದ ಕೊಳೆ ಮತ್ತು ಸಾರಾಯಿ ತಯಾರಿಸಲು ಬಳಸುತಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಕೇಶವಮೂರ್ತಿ, ಕಮಲಾಕರ, ಉಪ ನಿರೀಕ್ಷಕರಾದ ಸ್ವರ್ಣಶ್ರೀ, ರಂಜನ್, ಅಬ್ದುಲ್ ನಿಸಾರ್, ಪಾಂಡುರಂಗ, ರಕ್ಷಕರಾದ ಗದಿಗೆಪ್ಪ, ಮಲ್ಲಿಕಾರ್ಜುನ, ಪ್ರದೀಪ್, ರೋಹಿತ್, ಪ್ರತಾಪ್, ಇಮ್ರಾನ್, ಮಹದೇವಸ್ವಾಮಿ, ರವಿಕುಮಾರ್, ವಿಶ್ವನಾಥ್ ಇದ್ದರು.