ಜಿಲ್ಲೆ

ಮಹಿಳೆಯ ನಗ್ನ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಯುವಕನ ಬಂಧನ

ಕಾರವಾರ:ವಿವಾಹಿತ ಮಹಿಳೆಯ ಜತೆ ಅಕ್ರಮ ಸಂಬಂಧ ಬೆಳೆಸಿ, ಆಕೆಯ ನಗ್ನ ಫೋಟೋ, ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ್ನನು ಇಲ್ಲಿನ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವು ಗ್ರಾಮದ ಪ್ರಶಾಂತ ಭಟ್ ಮಣಿಲ ಬಂಧಿತ. ಶಿರಸಿ ವಾನಳ್ಳಿಯ ಮಹಿಳೆ ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಶಿರಸಿಯ ಮಹಿಳೆ ಸಂಗೀತದಲ್ಲಿ ಆಸಕ್ತಿ ಉಳ್ಳವಳಾಗಿದ್ದು, ಕ್ಲಬ್ ಹೌಸ್‌ನಲ್ಲಿ 2020 ರಲ್ಲಿ ಪ್ರಶಾಂತ ಭಟ್ ಪರಿಚಯವಾಗಿತ್ತು. ನಂತರ ಫೇಸ್‌ಬುಕ್‌, ವಾಟ್ಸ್ಆ್ಯಪ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಲುಗೆ ಬೆಳೆದಿತ್ತು. 2023 ರ ಜನವರಿ ಕೊನೆಯ ವಾರದಲ್ಲಿ ಇಬ್ಬರೂ ಶಿರಸಿಯಲ್ಲಿ ಭೇಟಿಯಾಗಿದ್ದು, ಲಾಡ್ಜ್‌ನಲ್ಲಿ ರೂಂ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಶಾಂತ ಭಟ್ ತಮ್ಮ ಜತೆ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು. ಎಂದು ಮಹಿಳೆ ಆರೋಪಿಸಿದ್ದಾರೆ. ʼ

ಅಲ್ಲದೆ, ಫೆಬ್ರವರಿ ಕೊನೆಯ ವಾರದಲ್ಲಿ ಇಬ್ಬರೂ ಇದೇ ಸ್ಥಳದಲ್ಲಿ ಮತ್ತೆ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಶಾಂತ ಭಟ್‌ ತಮ್ಮ ಫೋಟೋಗಳನ್ನು ತೆಗೆದುಕೊಂಡಿದ್ದ. ಅಲ್ಲದೆ, ವಿಡಿಯೋ ಕಾಲ್‌ ಮಾಡಿ ತಮ್ಮ ನಗ್ನ ದೇಹವನ್ನು ರೆಕಾರ್ಡ್‌ ಮಾಡಿಕೊಂಡಿದ್ದ. ಕೆಲ ದಿನಗಳ ನಂತರ ಇಬ್ಬರು ಇರುವ ವೈಯಕ್ತಿಕ ಫೋಟೋಗಳನ್ನು ಕಳಿಸಿ ಹಣ ಕೇಳಲಾರಂಭಿಸಿದ್ದ. ಮಹಿಳೆ ತನ್ನ ಪತಿಗೆ ತಿಳಿಸಿ 25 ಸಾವಿರ ರೂ.ಗಳನ್ನು ಪ್ರಶಾಂತ ಭಟ್‌ಗೆ ಕೊಡಿಸಿದ್ದಳು.

ಆದರೂ ಬಿಡದ ಪ್ರಶಾಂತ ಭಟ್‌ ವಿಡಿಯೋ, ಫೋಟೋಗಳನ್ನು ಮಹಿಳೆಯ ಪತಿ ಹಾಗೂ ತಾಯಿಗೆ ಕಳಿಸಿ ಅದನ್ನು ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ. 7 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಪ್ರಶಾಂತ ಭಟ್‌ ಗ್ರಾಪಂ ಮಾಜಿ ಸದಸ್ಯನಾಗಿದ್ದು, ಸಾಮಾಜಿಕವಾಗಿ ಸಕ್ರಿಯನಾಗಿದ್ದ ಎನ್ನಲಾಗಿದೆ.