ಜಿಲ್ಲೆ

ಶ್ರೀ ಮೋಹನದಾಸರ ಆರಾಧನಾ ಮಹೋತ್ಸವ 31ರಿಂದ

ಹುಬ್ಬಳ್ಳಿ: ಆಂಧ್ರಪ್ರದೇಶದ ಗುಂತಕಲ್​ನ ಚಿಪ್ಪಗಿರಿಯ ಶ್ರೀ ವಿಜಯದಾಸರ ಕಟ್ಟೆಯಲ್ಲಿ ಮೇ 31ರಿಂದ ಜೂನ್ 2ರವರೆಗೆ ಶ್ರೀ ಮೋಹನದಾಸರ ಆರಾಧನಾ ಮಹೋತ್ಸವ ಆಯೋಜಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಶ್ರೀ ವಿಜಯದಾಸರ ಭಕ್ತ ವೃಂದ ಕಾರ್ಯಕ್ರಮ ಸಂಘಟಿಸಿದೆ. ನಿತ್ಯ ಭಕ್ತವೃಂದದಿಂದ ಸಾಮೂಹಿಕ ವಿಜಯ ಕವಚ ಅಷ್ಟೋತ್ತರ, ಶ್ರೀ ವಿಜಯದಾಸರಿಗೆ ಒಲಿದು ಬಂದ ಗೋಪಾಲಕೃಷ್ಣನಿಗೆ ಪಂಚಾಮೃತ ಅಭಿಷೇಕ, ಪ್ರಾಣ ದೇವರಿಗೆ ಪೂಜೆ, ವಾಯುಸ್ತುತಿ ಪುನಶ್ಚರಣೆ, ಅಭಿಷೇಕ, ವಿದ್ವಾಂಸರಿಂದ ಉಪನ್ಯಾಸ, ನಿರಂತರ ಭಜನೆ, ಅಲಂಕಾರ ಸೇವೆ, ಇತ್ಯಾದಿ ಜರುಗಲಿವೆ. ಮಧ್ಯಾರಾಧನೆ ದಿನ ಬೆಳಗ್ಗೆ 8ರಿಂದ ಗ್ರಾಮ ಪ್ರದಕ್ಷಿಣೆ, ಬಳಿಕ ರಥೋತ್ಸವ ನಡೆಯಲಿದೆ. ಶ್ರೀ ಭೃಗುಋಷಿಗಳ ಅಂಶ ಸಂಭೂತರೆಂದು ಪ್ರಸಿದ್ಧರಾಗಿರುವ ಅಪರೋಕ್ಷ ಜ್ಞಾನಿಗಳಾದ ಶ್ರೀ ವಿಜಯದಾಸರ ಸಾಕು ಮಕ್ಕಳಾಗಿ ಬೆಳೆದು ಅವರಿಂದ ಅಪರೋಕ್ಷ ಜ್ಞಾನ ಪಡೆದು ಹರಿದಾಸ ಸಾಹಿತ್ಯಕ್ಕೆ ಸತ್ವಶಾಲಿ ಅಮೃತ ವೃಷ್ಟಿಯನ್ನು ನೀಡಿದವರು ಶ್ರೀ ಮೋಹನದಾಸರು. ಭಕ್ತರೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಡಾ. ಪಂ. ನಾರಾಯಣಾಚಾರ್ಯ ಧೂಳಖೇಡ ಕೋರಿದ್ದಾರೆ.