raichur 
ಜಿಲ್ಲೆ

ಸಚಿವರ ವಿರುದ್ಧ ಮಾಡಿದ ಆರೋಪ ಸತ್ಯಕ್ಕೆ ದೂರ

ರಾಯಚೂರು ಸಣ್ಣ ನಿರಾವರಿ ಸಚಿವ ಎನ್.ಎಸ್.ಬೊಸರಾಜು ಹಾಗೂ ಅವರ ಪತ್ರ ರವಿ ಬೊಸರಾಜು ಗುತ್ತಿಗೆದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ಕಮಿಷನ್ ಪಡೆಯುತ್ತಿದ್ದಾರೆಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆಂದು ಮಾಜಿ ನಗರಸಭೆ ಸದಸ್ಯ ವಿ.ಲಕ್ಷಿ÷್ಮÃ ರೆಡ್ಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೫೦ ವರ್ಷಗಳ ರಾಜಕೀಯ ಜೀವನದಲ್ಲಿ ಎನ್.ಎಸ್.ಬೋಸರಾಜ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಅವರು ಹಣದ ವಿಷಯದಲ್ಲಿ ಆರೋಪ ಹೊತ್ತಿಲ್ಲ. ಆದರೆ ದುರುದ್ದೇಶ ಪೂರಕವಾಗಿ ಮಂಜುನಾಥ ಆಧಾರ ರಹಿತ ಆರೋಪ ಮಾಡಿದ್ದಾರೆ. ೭೫ ವಯಸ್ಸಿನಲ್ಲಿದ್ದರೂ ಸಚಿವರಾಗಿ ಕೊಡುಗು ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಮುಖ ಅಭಿವೃದ್ದಿ ಯೋಜನೆಗಳಿಗೆ ಕಾರಣಿ ಭೂತರಾಗಿದ್ದಾರೆ.

ಕೋಟ್ಯಾಂತರ ರೂ. ಅನುದಾನ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಎಂದು ಸಲ್ಲದ ಆರೋಪಗಳಿಗೆ ಗುರಿಯಾಗಿಲ್ಲ.

ಸಣ್ಣ ನೀರಾವರಿ ಸಚಿವರಾಗಿದಿನಿಂದಲು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಸುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಮಂಜುನಾಥ ಇವರು ಗುತ್ತಿಗೆದಾರರಿಗೆ ಕೆಲಸ ಒದಗಿಸಲು ಪ್ಯಾಕೇಟ್ ವ್ಯವಸ್ಥೆಯನ್ನು ರದ್ದುಗೊಳಿಸುವದು, ನಿರ್ಮಿತಿ ಕೇಂದ್ರ, ಕ್ಯಾಶುಟಕೆ, ಕೆಆರ್‌ಐಡಿಎಲ್ ಸಂಸ್ಥೆಗಳನ್ನು ಮುಚ್ಚಿಸುವ ಮೂಲಕ ಎಲ್ಲಾ ಪಕ್ಷದ ರಾಜಕಾರಣಿಗಳ ಏಜೆನ್ಸಿಗಳ ಮೂಲಕ ಕೆಲಸ ನೀಡುವದನ್ನು

ತಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಯು.ಆಂಜಿನೆಯ್ಯ, ವಿರೇಶ ಇದ್ದರು.