ಜಿಲ್ಲೆ

ಗ್ರಾಮೀಣ ಮಕ್ಕಳ ಸಾಧನೆ ಅಮೋಘ

ಗುರುಪುರ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು, ಪಾಲಕರು ಮತ್ತು ಊರವರ ಪ್ರೋತ್ಸಾಹ ಅತಿ ಅಗತ್ಯ. ಗ್ರಾಮೀಣ ಶಾಲೆಗಳ ಮಕ್ಕಳ ಸಾಧನೆ ಉತ್ತಮವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.

ಪೊಳಲಿಯಲ್ಲಿ ಸರ್ಕಾರಿ ಪ್ರೌಢಶಾಲೆ ವತಿಯಿಂದ ಪೊಳಲಿಯ ಸರ್ವಮಂಗಳ ಸಭಾಗೃಹದಲ್ಲಿ ಬುಧವಾರ ಆಯೋಜಿಸಲಾದ ಸಮುದಾಯದತ್ತ ಕಾರ್ಯಕ್ರಮ ಮತ್ತು ಅಭಿನಂದನಾ ಸವಾರಂಭದಲ್ಲಿ ವಾತನಾಡಿದರು.

ಎಂಆರ್‌ಪಿಎಲ್‌ನ 6 ಲಕ್ಷ ರೂ. ನೆರವಿನಲ್ಲಿ ನಿರ್ಮಿಸಲಾದ ಶಾಲೆಯ ಶೌಚಗೃಹ ಉದ್ಘಾಟಿಸಿದರು.

ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕ್ರೀಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ದೈಹಿಕ ಶಿಕ್ಷಕ ಜಯಂತ ಆಚಾರ್ಯ ಅಭಿನಂದನಾ ಭಾಷಣಗೈದರು. ಇತ್ತೀಚೆಗೆ ಉಪಪ್ರಾಂಶುಪಾಲರಾಗಿ ಪದೋನ್ನತಿಗೊಂಡಿರುವ ಜಾನೆಟ್ ಲೋಬೋ ಅವರನ್ನು ಅಭಿನಂದಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾವಡ ಅಧ್ಯಕ್ಷತೆ ವಹಿಸಿದ್ದರು. ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ರಾಧಾ ಎಲ್., ಕೇಶವ ಪೊಳಲಿ, ಎಸ್‌ಡಿಎಂಸಿ ಸದಸ್ಯ ಯಶವಂತ ಪೊಳಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕ ಸುಬ್ರಾಯ ವೈ.ಎನ್.ಸ್ವಾಗತಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಜಾನೆಟ್ ಲೋಬೊ ಪ್ರಸ್ತಾವಿಸಿದರು. ಮರ್ಲಿನ್ ಪಾಯಸ್ ನಿರೂಪಿಸಿದರು. ವಸಂತಿ ವಂದಿಸಿದರು.