ಜಿಲ್ಲೆ

ಭಗವಂತನ ಅನುಗ್ರಹ ಪಡೆಯುವುದೇ ಮನುಷ್ಯತ್ವದ ಸಾಧನೆ

ಬಾಳೆಹೊನ್ನೂರು: ಮನುಷ್ಯನ ಸುಖ, ದುಃಖಗಳಿಗೆ ಜನ್ಮ ಜನ್ಮಾಂತರದಲ್ಲಿ ಮಾಡಿರುವ ಕರ್ಮ ಲಗಳೇ ಕಾರಣವಾಗಿರುತ್ತದೆ. ಈ ಕರ್ಮ ಲಗಳನ್ನು ಕಳೆದು ಭಗವಂತನ ಅನುಗ್ರಹ ಪಡೆಯುವುದೇ ಮನುಷ್ಯತ್ವದ ಸಾಧನೆಯಾಗಿದೆ ಎಂದು ಬುಕಡಿಬೈಲಿನ ಅರ್ಚಕ ವಿಶ್ವನಾಥ್ ಭಟ್ ಹೇಳಿದರು.
ಪಟ್ಟಣದ ಶ್ರೀವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಉಪಾಕರ್ಮದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಮಾತನಾಡಿದ ಅವರು, ಗುರಿ ಸಾಧಿಸ ಬೇಕಾದರೆ ಪ್ರತಿಯೊಬ್ಬ ಮನುಷ್ಯನು ಐದು ವಿಧವಾದ ದೇವಋಣ, ಪಿತೃ, ಮನುಷ್ಯ, ಭೂತ, ಋಷಿ ಋಣಗಳನ್ನು ವೇದೋಕ್ತ ಮಾರ್ಗದಿಂದ ಅನುಸರಿಸಿ ತೀರಿಸಬೇಕು. ನಿತ್ಯ ನೈಮಿತಿಕ ಕಾಮ್ಯ ಕರ್ಮಗಳನ್ನು ಕರ್ತವ್ಯ ಪೂರಕವಾಗಿ ಶ್ರದ್ಧೆಯಿಂದ ಮಾಡುವಂತಹ ಸಂಪ್ರದಾಯವಂತರಿಗೆ ಉಪಾಕರ್ಮ ಎಂಬ ಧರ್ಮಾಂಗವು ಅತ್ಯಂತ ಮಹತ್ತರವಾಗಿದೆ. ಇದರಲ್ಲಿ ಸಪ್ತಋಷಿ ಆರಾಧನೆ, ದೇವ, ಋಷಿ, ಪಿತೃ ತರ್ಪಣ ಪ್ರಾಮುಖ್ಯತೆ ಪಡೆದಿದೆ ಎಂದರು.
ವೇದ ಶಾಸ ಪುರಾಣ ಹೀಗೆ ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆದ್ದರಿಂದ ಎಲ್ಲ ವೇದಾಭಿಮಾನಿಗಳು ಬ್ರಾಹ್ಮಣರು ನಿತ್ಯ ಸಂಧ್ಯಾವಂದನೆ, ದೇವರ ಪೂಜೆ ಮಾಡಬೇಕು ಎಂದರು. ಉಪಾಕರ್ಮದಂದು ವೇದಾಧ್ಯಯನ ಮಾಡಲು ಪ್ರಾಶಸ್ತ್ಯ ದಿನವಾಗಿದ್ದು, ಕೆಲವೆಡೆ ಇಂದಿಗೂ ನೂರಾರು ಬ್ರಾಹ್ಮಣ ವಟುಗಳು ವೇದಾಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
ಕೂಟ ಮಹಾಜಗತ್ತು ಜಯಪುರ ಮತ್ತು ಕೊಪ್ಪ ಅಂಗ ಸಂಸ್ಥೆ ವಕ್ತಾರ ಯಜ್ಞಪುರುಷ ಹೇರಳೆ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಸಂಸ್ಕಾರ, ಸಂಪ್ರದಾಯಗಳನ್ನು ಮರೆಯುತ್ತಿರುವುದು ಶ್ರೇಯಸ್ಕರವಲ್ಲ. ಬ್ರಾಹ್ಮಣರು ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿಕೊಂಡು ಬಂದಾಗ ಮಾತ್ರ ಬ್ರಾಹ್ಮಣ್ಯಿಕೆ ಉಳಿಯುತ್ತದೆ ಎಂದರು.
ಅರ್ಚಕರಾದ ಸುನೀಲ್ ಭಟ್, ಮಾರ್ಕಂಡೇಯ ಭಟ್, ರಾಮಕೃಷ್ಣ ಹೊಳ್ಳ, ರಂಗನಾಥ ಹೊಳ್ಳ, ಶಿಶಿರ ಹೇರಳೆ, ಶರತ್, ನಾಗರಾಜ್ ಭಟ್, ಶಿವಸ್ವಾಮಿ, ವಿನಾಯಕ ಸೇರಿದಂತೆ ವಟುಗಳು ಭಾಗವಹಿಸಿದ್ದರು.