Oplus_131072 
ಜಿಲ್ಲೆ

ಪಕ್ಷಾತೀತವಾಗಿ ರಾಜ್ಯ 28 ಸಂಸದರು ಸಂಘಟಿತರಾಗಿ ಹೋರಾಟ ಮಾಡಬೇಕು

ಮೈಸೂರು: ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪಕ್ಷಾತೀತವಾಗಿ ರಾಜ್ಯ 28 ಸಂಸದರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಹಿಂದಿನಿಂದಲೂ ನಮ್ಮ ರಾಜ್ಯದ ಸಂಸದರ ನಡುವೆ ಒಗ್ಗಟ್ಟಿನ ಸಮಸ್ಯೆ ಇದೆ. ಎಲ್ಲ ಸಂಸದರು ಒಟ್ಟಾಗಿ ಸಮಸ್ಯೆ ಎದುರಿಸಬೇಕಿದೆ. ಅದರ ನಾಯಕತ್ವವನ್ನ ಮೂವರು ಮಾಜಿ ಮುಖ್ಯಮಂತ್ರಿಗಳು ವಹಿಸಿಕೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದಿನ ಸಂಸದರು ರಾಜ್ಯದ ನೆಲ, ಜಲ ಸೇರಿದಂತೆ ಎಲ್ಲ ಸಮಸ್ಯೆಗಳ ಬಗ್ಗೆ ಪ್ರಧಾನಿ ಬಳಿ ಹೋಗಲಿಲ್ಲ ಎಂಬ ದೂರು ಇದೆ. ಅದನ್ನು ಈ ಬಾರಿ ಪರಿಹರಿಸಿಕೊಳ್ಳಬೇಕು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಈ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರ ಪಾತ್ರ ದೊಡ್ಡದಿದೆ. ಇವರು ಎಲ್ಲರನ್ನು ಸಂಘಟಿಸಿ ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸಲು ಹೋರಾಟ ಮಾಡಬೇಕಿದೆ ಎಂದರು.

ಸಂಸತ್‌ನಲ್ಲಿ ಬೇರೆ ರಾಜ್ಯದವರು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದಾಗ ಆ ರಾಜ್ಯದ ಸಂಸದರು ಎದ್ದು ಚಪ್ಪಾಳೆ ಹೊಡೆಯುತ್ತಿದ್ದರು. ಆದರೆ ನಮ್ಮ ಎಚ್.ಡಿ.ದೇವೆಗೌಡರು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದಾಗ ಅವರ ಪಕ್ಷದ ಚೆಲುವರಾಯಸ್ವಾಮಿ ಸಹ ಚಪ್ಪಾಳೆ ಹೊಡಯಲಿಲ್ಲ. ಇದು ನಮ್ಮ ರಾಜ್ಯದಲ್ಲಿ ಒಗ್ಗಟ್ಟು ಇಲ್ಲ ಎಂಬುದನ್ನು ತೋರಿಸುತ್ತದೆ ಎಂದರು.