ಚಿಂತಾಮಣಿ: ನೆರೆಯ ಆಂಧ್ರಪ್ರದೇಶದ ಪ್ರಖ್ಯಾತ ದೇವಾಲಯವಾದ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರಸ್ವಾಮಿ ಸನ್ನಿಧಾನಕ್ಕೆ ಇಲ್ಲಿನ ಭಕ್ತರು ಭಾನುವಾರ ತರಕಾರಿ ತುಂಬಿದ 134ನೇ ಲಾರಿಯನ್ನು ಕಳುಹಿಸಿಕೊಟ್ಟರು.
ಚಿಂತಾಮಣಿ ಪ್ಲವರ್ ವೆಜಿಟೆಬಲ್ ದಾನಿ ಎನ್.ಸೋಮಶೇಖರ್ ಬಾಬು ಮಾತನಾಡಿ, ತರಕಾರಿ ಲಾರಿಗೆ ನಗರದ ಹೊರವಲಯ ಕೋಲಾರ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿ ಲಾರಿಯನ್ನು ಕಳುಹಿಸಿಕೊಡಲಾಗುತ್ತಿದೆ. ಇಂದು ಚಿಂತಾಮಣಿಯಿಂದ 134ನೇ ಲಾರಿ ಲೋಡ್ ತರಕಾರಿ ರವಾನೆಯಾಗುತ್ತಿದೆ ಎಂದರು.
ಬೆಂಗಳೂರಿನ ಶ್ರೀ ಲ್ಮ ಬಾಲಾಜಿ ಸಿಲ್ವರ್ ಪ್ಯಾರಾಡೈಸ್ನ ಬದ್ರಿನಾಥ್ ಇಂದಿನ ದಾನಿಗಳಾಗಿದ್ದು, ಅವರ ಹುಟ್ಟುಹಬ್ಬದ ಅಂಗವಾಗಿ 12 ಟನ್ ವಿವಿಧ ತರಕಾರಿ ಮತ್ತು ಸೊಪ್ಪು ಕಳುಹಿಸಲಾಗುತ್ತಿದೆ.
ಇತ್ತೀಚೆಗೆ ನಡೆದ ಬ್ರಹ್ಮರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಪತಿ ತಿರುಮಲಕ್ಕೆ ಬಂದಿದ್ದರಿಂದ ದೇವಾಲಯದ ಅಧಿಕಾರಿಗಳ ಬೇಡಿಕೆಯಂತೆ ತರಕಾರಿ ರವಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ದಾನಿಗಳಾದ ಬದ್ರಿನಾಥ್, ಸೋಮೆಶೇಖರ್, ಗಂಗಾಧರ್, ಕಾಮೇಶ್ವರ ಇತರರು ಇದ್ದರು.