ತಾವರಗೇರಾದ ರಾಜಭಾಗ ಸವಾರ ಉರುಸು ಬುಧವಾರ ವಿಜೃಂಭಣೆಯಿಂದ ನಡೆಯಿತು. ರಾಜಮಹಮ್ಮದ್, ಇಬ್ರಾಹಿಂ ಸೇರಿ ಹಮೀದಸಾಬ, ಶಂಕರ ಮಡಿವಾಳರ, ರಿಯಾಜ್, ಸಲೀಮ್ ಸಾಬ, ಫಯಾಜ, ಮೈಬೂಸಾಬ ಮರಕಟ್, ರಫಿಕ್, ಸದ್ದಾಂಹುಸೇನ್ ಇದ್ದರು. 
ಜಿಲ್ಲೆ

ಯಮನೂರಪ್ಪ ಉರುಸು ಆಚರಣೆ

ಶ್ರೀನಾಥ

ತಾವರಗೇರಾ: ಪಟ್ಟಣದ ರಾಜಭಾಗ ಸವಾರ ಉರುಸು ಶ್ರದ್ಧಾಭಕ್ತಿಯಿಂದ ಬುಧವಾರ ನಡೆಯಿತು.

ಹಿಂದು, ಮುಸ್ಲಿಂ ಸಮುದಾಯ ಭಾವೈಕ್ಯದಿಂದ ಉರುಸಿನ ಮೂರು ದಿನಗಳ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬೆಳಗ್ಗೆಯಿಂದಲೇ ಯಮನೂರಪ್ಪ ದರ್ಗಾಕ್ಕೆ ತೆರಳಿ ಪಂಜದ ದೇವರಿಗೆ ಸಕ್ಕರೆ, ಬೆಲ್ಲ, ಉಪ್ಪು ಹಾಗೂ ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು.

ಪಟ್ಟಣದ ಸುತ್ತಲಿನ ಗ್ರಾಮಗಳಿಂದ ಅನೇಕ ಭಕ್ತರು ಆಗಮಿಸಿ, ದರ್ಗಾದ ದರ್ಶನ ಪಡೆದು ಪ್ರಸಾದ ಸೇವಿಸಿದರು. ಯಮನೂರಪ್ಪ ದರ್ಗಾದ ಮುತುವಲ್ಲಿಗಳಾದ ರಾಜಮಹಮ್ಮದ್, ಇಬ್ರಾಹಿಂ ಸೇರಿ ಇತರರಿದ್ದರು.