ಜಿಲ್ಲೆ

ದಾವಣಗೆರೆ ಜಿಲ್ಲೆಯ ಹರಿಹರದ ಭರಂಪುರದಲ್ಲಿ ಮೆಣಸಿನಕಾಯಿ ಬಜ್ಜಿ ಭರ್ಜರಿ ಮಾರಾಟ, ತಹಸೀಲ್ದಾರ್​ರಿಂದ ಕ್ಲಾಸ್​

ದಾವಣಗೆರೆ: ದಾವಣಗೆರೆ ಎಂದ ಕೂಡಲೇ ಬೆಣ್ಣೆ ದೋಸೆ ಜತೆಗೆ ಮಂಡಕ್ಕಿ ಮೆಣಸಿನಕಾಯಿ ಸಹಜವಾಗಿ ನೆನಪಾಗುತ್ತದೆ. ಆದರೆ ಸದ್ಯ ಕರೊನಾ ವೈರಸ್​ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆಯಾಗಿರುವ ಕಾರಣ ಇವುಗಳ ಮಾರಾಟವೂ ಬಂದ್​ ಆಗಿದೆ.

ಹೀಗಿದ್ದೂ ಜಿಲ್ಲೆಯ ಹರಿಹರದ ಭರಂಪುರದಲ್ಲಿ ವ್ಯಕ್ತಿಯೊಬ್ಬ ಮೆಣಸಿನಕಾಯ ಬಜ್ಜಿ ಮಾರಾಟದ ಕಾಯಕವನ್ನು ಎಂದಿನಂತೆ ಶುಕ್ರವಾರವೂ ಮುಂದುವರಿಸಿದ್ದ. ಲಾಕ್​ಡೌನ್​ ಇದ್ದರೂ ಮನೆಯಲ್ಲೇ ಇದ್ದು ಬೇಸರಗೊಂಡಿದ್ದ ಜನರು ತಮ್ಮ ಜಿಹ್ವಾ ಚಪಲ ತೀರಿಸಿಕೊಳ್ಳಲು ಮೆಣಸಿನಕಾಯಿ ಬಜ್ಜಿ, ಮಂಡಕ್ಕಿ ತಿನ್ನಲು ಮುಗಿಬಿದ್ದಿದ್ದರು.

ವಿಷಯ ತಿಳಿದ ತಹಸೀಲ್ದಾರ್​ ರಾಮಚಂದ್ರಪ್ಪ ನಗರಸಭೆ ಆಯುಕ್ತರ ಜತೆಗೂಡಿ ಸ್ಥಳಕ್ಕೆ ತೆರಳಿ, ಮೆಣಸಿನಕಾಯ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಗೆ ವ್ಯಾಪಾರ ನಿಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾರಾದರೂ ಮನೆಯಿಂದ ಹೊರಬರುವ ದುಸ್ಸಾಹ ಮತ್ತೊಮ್ಮೆ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.