ಶಿವಮೊಗ್ಗದಲ್ಲಿ ಕದಳಿ ವನಿತಾ ಸಮಾಜ ಆಯೋಜಿಸಿದ್ದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು. ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಪಿ.ದಿನೇಶ್, ಅರುಣಾ ಚಂದ್ರಶೇಖರ್, ಸವಿತಾ ರಮೇಶ್, ಶೈಲಾ ರವಿಕುಮಾರ್, ರೂಪಾ ಇತರರಿದ್ದರು. 
ಜಿಲ್ಲೆ

ಜಾನಪದ ನೃತ್ಯ ಸ್ಪರ್ಧೆಯಲ್ಲಿ ತರಂಗ ಶಾಲೆ ಪ್ರಥಮ

ಶಿವಮೊಗ್ಗ: ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತರಂಗ ಶಾಲೆ ಮಕ್ಕಳು ಪ್ರಥಮ ಬಹುಮಾನ ಪಡೆದರು.

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶನಿವಾರ ಕದಳಿ ವನಿತಾ ಸಮಾಜದಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಒಟ್ಟು 23 ತಂಡಗಳು ಭಾಗವಹಿಸಿದ್ದು, ದುರ್ಗಿಗುಡಿ ಶಾಲೆ ದ್ವಿತೀಯ ಮತ್ತು ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ತೃತೀಯ ಬಹುಮಾನ ಪಡೆದುಕೊಂಡರು.

ವಿವಿಧ ಶಾಲೆಗಳ ಮಕ್ಕಳು ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಕೊರವಂಜಿ ನೃತ್ಯ ಪ್ರದರ್ಶಿಸಿದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಶ್ರೀ ಬಸವೇಶ್ವರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕದಳಿ ವನಿತಾ ಸಮಾಜದ ಅಧ್ಯಕ್ಷೆ ಅರುಣಾ ಚಂದ್ರಶೇಖರ್, ಉಪಾಧ್ಯಕ್ಷೆ ಸವಿತಾ ರಮೇಶ್, ಕಾರ್ಯದರ್ಶಿ ಶೈಲಾ ರವಿಕುಮಾರ್, ಖಜಾಂಚಿ ರೂಪಾ, ನಿರ್ದೇಶಕಿಯರಾದ ಶೋಭಾ ಮಂಜುನಾಥ್, ಗಿರಿಜಾ, ಜ್ಯೋತಿ, ಭಾರತಿ, ವಾಸಂತಿ ಇತರರಿದ್ದರು.